ಸಿಎಎ ವಿರೋಧಿ ಪ್ರತಿಭಟನೆ: ಅಸ್ಸಾಮಿ ಪತ್ರಕರ್ತನಿಗೆ ಎನ್‌ಐಎ ಸಮನ್ಸ್

Update: 2020-05-15 17:39 GMT

ಹೊಸದಿಲ್ಲಿ, ಎ. 11: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ವಿರುದ್ಧ ಕಳೆದ ವರ್ಷ ಅಸ್ಸಾಂನಲ್ಲಿ ನಡೆದ ಪ್ರತಿಭಟನೆಯ ಸಂದರ್ಭ ಭುಗಿಲೆದ್ದ ಹಿಂಸಾಚಾರದಲ್ಲಿ ಸಾಮಾ ಜಿಕ ಹೋರಾಟಗಾರ ಅಖಿಲ್ ಗೊಗೊಯ್ ಪಾತ್ರ ವಹಿಸಿದ್ದರೆಂಬ ಆರೋಪಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಪತ್ರಕರ್ತ ಮಾನಸ್ ಜ್ಯೋತಿ ಬರುವಾ ಅವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ಸಮನ್ಸ್ ನೀಡಿದೆ.

ಗುವಾಹಟಿ ಮೂಲದ ಸುದ್ದಿ ವೆಬ್‌ಸೈಟ್ ಒಂದರ ಪತ್ರಕರ್ತನಾದ ಬರುವಾ ಈ ಹಿಂದೆ ಹಲವಾರು ಅಸ್ಸಾಮಿ ಸುದ್ದಿ ಚಾನೆಲ್‌ಗಳಲ್ಲಿ ಕಾರ್ಯನಿರ್ವಹಿಸಿದ್ದರು. ಹಲವಾರು ವರ್ಷಗಳಿಂದ ಅಖಿಲ್ ಗೊಗೊಯ್ ಮತ್ತವರ ಸಂಘಟನೆಯ ಚಟುವಟಿಕೆಗಳನ್ನು ವರದಿ ಮಾಡಿದ್ದರು.

ದೂರವಾಣಿ ಕರೆಯ ಮೂಲಕ ತನಗೆ ವಿಚಾರಣೆಗೆ ಹಾಜರಾಗುವಂತೆ ಎನ್‌ಐಎ ನೋಟಿಸ್ ನೀಡಿರುವುದಾಗಿ ಬರುವಾ ತಿಳಿಸಿದ್ದಾರೆ. ಗುವಾಹಟಿಯಲ್ಲಿ ಗೊಗೊಯಿ ವಿರುದ್ಧ ಎನ್‌ಐಎ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದ ಕೆಲವೊಂದು ಮಾಹಿತಿ ಯನ್ನು ನೀಡಲು, ಸೋನಪುರದಲ್ಲಿರುವ ಎನ್‌ಐಎ ಕಚೇರಿಗೆ ಹೋಗುವಂತೆ ಅವರಿಗೆ ಏಜೆನ್ಸಿಯ ಹೆಚ್ಚುವರಿ ಪೊಲೀಸ್ ನಿರ್ದೇಶಕ ಡಿ.ಆರ್.ಸಿಂಗ್ ಬರುವಾ ತಿಳಿಸಿದ್ದಾರೆಂದು ‘ ದಿ ಹಿಂದೂ’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News