ಸೋಂಕು ನಿವಾರಕ ಔಷಧಿ ಸಿಂಪಡಣೆಯಿಂದ ಅಪಾಯವೇ ಹೊರತು, ಕೊರೋನ ವೈರಸ್ ಸಾಯುವುದಿಲ್ಲ

Update: 2020-05-17 11:23 GMT

ಜಿನೀವಾ: ಹಲವು ದೇಶಗಳಲ್ಲಿ ಬೀದಿಗಳಲ್ಲಿ ಸೋಂಕು ನಿವಾರಕ ಔಷಧಿ ಸಿಂಪಡಿಸುವುದು ಕಂಡುಬಂದಿದ್ದು, ಇದರಿಂದ ಕೊರೋನ ವೈರಸ್ ನಿರ್ಮೂಲನೆಯಾಗುವುದಿಲ್ಲ; ಬದಲಾಗಿ ಇದರಿಂದ ಆರೋಗ್ಯಕ್ಕೆ ಅಪಾಯ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಕೊರೋನ ವೈರಸ್‍ಗೆ ಪ್ರತಿಯಾಗಿ ಮೇಲ್ಮೈ ಸ್ವಚ್ಛಗೊಳಿಸುವುದು ಮತ್ತು ಸೋಂಕು ನಿವಾರಕಗಳ ಸಿಂಪಡಣೆ ಬಗೆಗಿನ ಸಾಕ್ಷ್ಯಚಿತ್ರದಲ್ಲಿ, ಔಷಧಿ ಸಿಂಪಡಣೆ ಪರಿಣಾಮಕಾರಿಯಲ್ಲ ಎಂದು ಸ್ಪಷ್ಟಪಡಿಸಿದೆ.

“ಕೋವಿಡ್-19 ವೈರಸ್ ಅಥವಾ ಇತರ ರೋಗಾಣುಗಳನ್ನು ಸಾಯಸುವ ಸಲುವಾಗಿ ಬೀದಿ ಅಥವಾ ಮಾರುಕಟ್ಟೆಯಂಥ ಹೊರಾಂಗಣ ಪ್ರದೇಶದಲ್ಲಿ ಸೋಂಕು ನಿವಾರಕ ಸಿಂಪಡಿಸಲು ಶಿಫಾರಸ್ಸು ಮಾಡಿಲ್ಲ. ಏಕೆಂದರೆ ಸೋಂಕು ನಿವಾರಕ ಕ್ರಮವು ಕೊಳಕು ಮತ್ತು ಚಿಂದಿಯನ್ನು ನಿಷ್ಕ್ರಿಯಗೊಳಿಸುತ್ತದೆ”ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ.

“ಜೈವಿಕ ಅಂಶಗಳು ಅಲ್ಲದಿದ್ದರೂ, ರಾಸಾಯನಿಕಗಳ ಸಿಂಪಡಣೆಯು ರೋಗಕಾರಕ ಕಣಗಳನ್ನು ನಿಷ್ಕ್ರಿಯಗೊಳಿಸಲು ಅಗತ್ಯವಿರುವಷ್ಟು ಅವಧಿಯಲ್ಲಿ ಎಲ್ಲ ಕಡೆ ಸಿಂಪಡಣೆ ನಡೆಸಲು ಸಾಧ್ಯವಿಲ್ಲ” ಎಂದು ಅದು ಹೇಳಿದೆ. ಬೀದಿ ಅಥವಾ ಫುಟ್‍ಪಾತ್‍ಗಳನ್ನು ಸೋಂಕಿನ ಮೂಲಗಳೆಂದು ಪರಿಗಣಿಸಬೇಕಿಲ್ಲ. ಹೊರಗೆ ಇಂಥ ರಾಸಾಯನಿಕಗಳ ಸಿಂಪಡಣೆ ಆರೋಗ್ಯಕ್ಕೆ ಹಾನಿಕಾರಕವಾಗಬಲ್ಲದು ಎಂದು ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News