ಫ್ಯಾಕ್ಟ್ ಚೆಕ್: ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮೇಲೆ ಹಲ್ಲೆ ಎಂಬ ವಿಡಿಯೋ ಸುಳ್ಳು

Update: 2020-05-17 11:58 GMT

ಕೊಲ್ಕತ್ತಾ: ವ್ಯಕ್ತಿಯೊಬ್ಬನಿಗೆ ಗುಂಪೊಂದು ನಿರ್ದಯವಾಗಿ ಥಳಿಸುತ್ತಿರುವ ಮತ್ತು ಅಲ್ಲಿ ಸೇರಿದ ಗುಂಪು ಹಿಂಸೆಗೆ ಪ್ರಚೋದನೆ ನೀಡುತ್ತಿರುವ ವಿಡಿಯೊವೊಂದನ್ನು ಹಲವು ಟ್ವಿಟ್ಟರ್ ಬಳಕೆದಾರರು ಶೇರ್ ಮಾಡಿದ್ದಾರೆ. ಇದು ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ವಿರುದ್ಧದ ಹಿಂಸೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳದ ತೆಲಿನಿಪಾರ ಎಂಬಲ್ಲಿ ಕೋಮುಗಲಭೆ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಈ ವಿಡಿಯೊ ಶೇರ್ ಮಾಡಿದ್ದಾರೆ. ಒಂದು ಸಮುದಾಯದವರು ಮತ್ತೊಂದು ಗುಂಪನ್ನು ಕುರಿತು ‘ಕೊರೋನ’ ಎಂದು ಹೀಯಾಳಿಸಿದ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಎರಡು ಗುಂಪುಗಳು ಪರಸ್ಪರ ಬಾಂಬ್ ಎಸೆದುಕೊಂಡಿದ್ದು, 129 ಮಂದಿಯನ್ನು ಬಂಧಿಸಲಾಗಿದೆ. ಟ್ವಿಟ್ಟರ್ ಬಳಕೆದಾರ ಆಕಾಶ್ ಆರ್‍ಎಸ್‍ಎಸ್, ಈ ವಿಡಿಯೊ ಶೇರ್ ಮಾಡಿ, ಮುಸ್ಲಿಂ ಜನಸಂಖ್ಯೆ ದೇಶದಲ್ಲಿ 50% ದಾಟಿದ ದಿನವೇ, ಇದು ಎಲ್ಲ ಹಿಂದೂಗಳ ಸ್ಥಿತಿಯಾಗಲಿದೆ”ಎಂದು ಶೀರ್ಷಿಕೆ ನೀಡಿದ್ದರು.

ಈ ವಿಡಿಯೊ ತುಣುಕನ್ನು ಕತ್ತರಿಸಿ ಹಲವು ಪ್ರಮುಖ ಫ್ರೇಮ್‍ಗಳನ್ನು ರಿವರ್ಸ್ ಸರ್ಚ್ ಮಾಡಿದಾಗ, ಇದು ಏಪ್ರಿಲ್‍ನಲ್ಲಿ ಬಾಂಗ್ಲಾದೇಶದ ಪೇಜ್‍ಗಳಿಂದ ಶೇರ್ ಆದದ್ದು ದೃಢಪಟ್ಟಿದೆ. ಆಟೊ ಕದ್ದದ್ದಕ್ಕಾಗಿ ಬಾಂಗ್ಲಾದಲ್ಲಿ ಕಳ್ಳರಿಗೆ ಥಳಿಸಿರುವ ವಿಡಿಯೋ ಇದು ಎನ್ನುವುದು ಫೇಸ್ ಬುಕ್ ಪೋಸ್ಟ್ ಒಂದರಿಂದ ದೃಢಪಟ್ಟಿದೆ.

ವಿಡಿಯೊದಲ್ಲಿ ಗುಂಪು ಆಟೊ ಎಂದು ಕೂಗುತ್ತಿರುವುದು ಕೇಳಿ ಬರುತ್ತಿದೆ. ಈ ಸುಳಿವಿನ ಹಿನ್ನೆಲೆಯಲ್ಲಿ ಆಳವಾಗಿ ಹುಡುಕಿದಾಗ 2019ರ ಮಾರ್ಚ್‍ನಲ್ಲಿ ಈ ಸಂಬಂಧ ಹಲವು ಪೋಸ್ಟ್‍ಗಳು ಪ್ರಕಟವಾಗಿರುವುದು ತಿಳಿದುಬಂದಿದೆ. ಆದ್ದರಿಂದ ಇದು ಹಳೆಯ ವಿಡಿಯೊ ಮತ್ತು ಪಶ್ಚಿಮ ಬಂಗಾಳದ ಘಟನೆಗೂ ಇದಕ್ಕೂ ಸಂಬಂಧ ಇಲ್ಲ ಎಂದು ಸ್ಪಷ್ಟವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News