ಟಿವಿ ನಟ ಮನ್ಮೀತ್ ಗ್ರೆವಾಲ್ ಆತ್ಮಹತ್ಯೆ

Update: 2020-05-17 16:28 GMT

ಮುಂಬೈ, ಮೇ 17: ‘ಆದತ್ ಸೆ ಮಜಬೂರ್ ’ಮತ್ತು ‘ಕುಲದೀಪಕ್’ನಂತಹ ಟಿವಿ ಶೋಗಳಲ್ಲಿ ಕಾರ್ಯ ನಿರ್ವಹಿಸಿದ್ದ ನಟ ಮನ್ಮೀತ್ ಗ್ರೆವಾಲ್ (32) ಅವರು ಶುಕ್ರವಾರ ರಾತ್ರಿ ಮುಂಬೈನ ಖಾರ್‌ಘರ್‌ನಲ್ಲಿಯ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪಂಜಾಬ ಮೂಲದ ಗ್ರೆವಾಲ್ ಇಲ್ಲಿ ತನ್ನ ಪತ್ನಿಯೊಂದಿಗೆ ವಾಸವಾಗಿದ್ದರು.

ಗ್ರೆವಾಲ್ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದರು ಮತ್ತು ಲಾಕ್‌ಡೌನ್‌ನಿಂದಾಗಿ ಅವರ ಗಳಿಕೆಯೂ ನಿಂತುಹೋಗಿತ್ತು. ಆದಾಯವಿಲ್ಲದೆ ಸಾಲ ಮರುಪಾವತಿ ಸಾಧ್ಯವಾಗದೆ ಇನ್ನಷ್ಟು ಒತ್ತಡದಲ್ಲಿದ್ದ ಅವರು ಖಿನ್ನತೆಗೆ ಒಳಗಾಗಿದ್ದರು. ಅವರ ಪತ್ನಿ ತೀವ್ರ ಆಘಾತಕ್ಕೊಳಗಾಗಿದ್ದಾರೆ ಎಂದು ಗ್ರೆವಾಲ್‌ರ ಕುಟುಂಬ ಸ್ನೇಹಿತ ಹಾಗು ನಿರ್ಮಾಪಕ ಮಂಜಿತ್ ಸಿಂಗ್ ರಾಜಪೂತ್ ತಿಳಿಸಿದರು. ಗ್ರೆವಾಲ್ ವೆಬ್-ಸಿರೀಸ್ ಮತ್ತು ಕೆಲವು ಜಾಹೀರಾತುಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು,ಆದರೆ ಲಾಕ್‌ಡೌನ್‌ನಿಂದಾಗಿ ಈ ಯೋಜನೆಗಳು ಸ್ಥಗಿತಗೊಂಡಿವೆ ಎಂದರು. ಗ್ರೆವಾಲ್ ಅಂತ್ಯಕ್ರಿಯೆ ಶನಿವಾರ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News