ಹಸಿರು ವಲಯವಾಗಿದ್ದ ಗೋವಾದಲ್ಲಿ ಮತ್ತೆ ತಲೆಯೆತ್ತಿದ ಕೋವಿಡ್-19

Update: 2020-05-18 16:16 GMT

ಪಣಜಿ,ಮೇ 18: ಎರಡು ವಾರಗಳ ಹಿಂದಷ್ಟೇ ಹಸಿರು ವಲಯವೆಂದು ಘೋಷಿತಗೊಂಡಿದ್ದ ಗೋವಾದಲ್ಲಿ ಮತ್ತೆ ಕೊರೋನ ವೈರಸ್‌ನ ಅಬ್ಬರ ಆರಂಭಗೊಂಡಿದೆ. ರವಿವಾರ ಒಂದೇ ದಿನ ಒಂಭತ್ತು ಹೊಸ ಪ್ರಕರಣಗಳು ಪತ್ತೆಯಾಗಿದ್ದು,ಇದರೊಂದಿಗೆ ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 22ಕ್ಕೇರಿದೆ.

ಈ ಪೈಕಿ ಆರು ಜನರು ಶನಿವಾರ ದಿಲ್ಲಿ-ತಿರುವನಂತಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ ಗೋವಾಕ್ಕೆ ಆಗಮಿಸಿದ್ದರು.

ಎಲ್ಲ 22 ರೋಗಿಗಳನ್ನು ಮಡಗಾಂವ್‌ನ ವಿಶೇಷ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೋರ್ವರು ಸೋಮವಾರ ಇಲ್ಲಿ ತಿಳಿಸಿದರು.

ಈ ಹಿಂದೆ ಪತ್ತೆಯಾಗಿದ್ದ ಎಲ್ಲ ಏಳೂ ಕೋವಿಡ್-19 ರೋಗಿಗಳು ಚೇತರಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಮೇ 1ರಂದು ಗೋವಾವನ್ನು ಹಸಿರು ವಲಯ ಎಂದು ಘೋಷಿಸಲಾಗಿತ್ತು. ಆದರೆ ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ.

ರಾಜ್ಯದಲ್ಲಿ ಸಮುದಾಯ ಸೋಂಕು ಕಂಡು ಬಂದಿಲ್ಲ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ತಿಳಿಸಿದ್ದಾರೆ.

ಕೈಗಾರಿಕಾ ಘಟಕಗಳು ಪುನರಾರಂಭಗೊಂಡಿರುವ ಹಿನ್ನೆಲೆಯಲ್ಲಿ ನೆರೆಯ ರಾಜ್ಯಗಳಿಂದ ಕರೆತರಲಾಗಿದ್ದ ಮೂವರು ಕಾರ್ಮಿಕರೂ ಕೊರೋನ ವೈರಸ್‌ಗೆ ಪಾಸಿಟಿವ್ ಆಗಿದ್ದಾರೆ ಎಂದು ಅಧಿಕಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News