ಕಾಂಗ್ರೆಸ್ ವಕ್ತಾರ ಸಂಜಯ್ ಝಾಗೆ ಕೊರೋನ ವೈರಸ್ ಸೋಂಕು

Update: 2020-05-22 18:29 GMT

ಹೊಸದಿಲ್ಲಿ: ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಪಕ್ಷದ ವಕ್ತಾರ ಸಂಜಯ್ ಝಾ ಅವರಿಗೆ ಕೊರೋನ ಸೋಂಕು ತಗಲಿರುವುದು ಶುಕ್ರವಾರ ದೃಢಪಟ್ಟಿದೆ.

ಕೊರೋನ ಪರೀಕ್ಷೆಯಲ್ಲಿ ಫಲಿತಾಂಶ ಪಾಸಿಟಿವ್ ಬಂದಿದ್ದು, ಯಾವುದೇ ರೋಗಲಕ್ಷಣ ಕಂಡುಬಂದಿಲ್ಲ ಎಂದು ಅವರು ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. ಮುಂದಿನ 10-12 ದಿನಗಳ ಕಾಲ ಮನೆಯಲ್ಲೇ ಕ್ವಾರಂಟೈನ್‌ನಲ್ಲಿ ಇರುವುದಾಗಿ ಹೇಳಿದ್ದಾರೆ.

ನಮಗೆಲ್ಲರಿಗೂ ಈ ಸೋಂಕು ತಗುಲುವ ಅಪಾಯವಿದೆ. ಯಾರೂ ಸೋಂಕು ಹರಡುವ ಅಪಾಯ ಸಾಧ್ಯತೆಯನ್ನು ಕಡೆಗಣಿಸಬಾರದು ಎಂದು ಸಲಹೆ ಮಾಡಿದ್ದಾರೆ.

ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದಿದೆ. ಆದರೆ ಯಾವ ಲಕ್ಷಣವೂ ಕಾಣಿಸಿಕೊಂಡಿಲ್ಲ. ಮುಂದಿನ 10-12 ದಿನ ವರೆಗೆ ನಾನು ಹೋಮ್ ಕ್ವಾರಂಟೈನ್ ‌ನಲ್ಲಿರುತ್ತೇನೆ. ‘’ದಯವಿಟ್ಟು ಹರಡುವ ಅಪಾಯ ಕಡೆಗಣಿಸಬೇಡಿ. ನಮಗೆಲ್ಲರಿಗು ಹರಡುವ ಅಪಾಯ ಇದ್ದೇ ಇದೆ. ಆದಷ್ಟು ಕಾಳಜಿ ವಹಿಸಿ’’ ಎಂದು ಟ್ವಿಟ್ಟರ್‌ನಲ್ಲಿ ಸಲಹೆ ಮಾಡಿದ್ದಾರೆ.

ಈ ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ವಿವಿಧ ಪಕ್ಷಗಳ ಮುಖಂಡರೂ ಸೇರಿದಂತೆ ನೂರಾರು ಮಂದಿ ಶೀಘ್ರ ಗುಣಮುಖರಾಗುವಂತೆ ಝಾ ಅವರಿಗೆ ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News