ನಿಮ್ಮ ಕೆಲಸ ನೀವು ಮಾಡಿ ಎಂದು ಕೇಂದ್ರಕ್ಕೆ ಆರ್‌ಬಿಐ ಸ್ಪಷ್ಟವಾಗಿ ಹೇಳಲಿ: ಚಿದಂಬರಂ

Update: 2020-05-23 07:55 GMT

ಹೊಸದಿಲ್ಲಿ,ಮೇ 23: ಕೊರೋನವೈರಸ್‌ನಿಂದಾಗಿ ಹಾನಿಗೀಡಾಗಿರುವ ರಾಷ್ಟ್ರೀಯ ಆರ್ಥಿಕತೆಯನ್ನು ರಕ್ಷಿಸಲು ಹಾಗೂ ಮತ್ತೆ ಆರಂಭಿಸಲು "ನಿಮ್ಮ ಕೆಲಸ ನೀವು ಮಾಡಿ ಹಾಗೂ ಹಣಕಾಸು ಕ್ರಮಗಳನ್ನು ತೆಗೆದುಕೊಳ್ಳಿ'' ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಕೇಂದ್ರ ಸರಕಾರಕ್ಕೆ ಸ್ಪಷ್ಟವಾಗಿ ಹೇಳಬೇಕಾಗಿದೆ ಎಂದು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಇಂದು ಬೆಳಗ್ಗೆ ಒತ್ತಾಯಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ದ ಹರಿಹಾಯ್ದ ಚಿದಂಬರಂ, ಜಿಡಿಪಿಯ ಶೇ.1ಕ್ಕಿಂತ ಕಡಿಮೆ ಹಣಕಾಸಿನ ಉತ್ತೇಜನವನ್ನು ಹೊಂದಿರುವ 20 ಲಕ್ಷ ಕೋ.ರೂ.ಪರಿಹಾರ ಪ್ಯಾಕೇಜ್‌ನ್ನು ಮರುಪರಿಶೀಲಿಸಬೇಕೆಂದು ಒತ್ತಾಯಿಸಿದರು.

"ಬೇಡಿಕೆ ಕುಸಿದಿದೆ. 2020-21ರ ಬೆಳವಣಿಗೆಯು ನಕಾರಾತ್ಮಕ ಪ್ರದೇಶದತ್ತ ಸಾಗುತ್ತಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ನಂತರ ಅವರು ಏಕೆ ಲಿಕ್ವಿಡಿಟಿಯನ್ನು ತುಂಬುತ್ತಿದ್ದಾರೆ. ನಿಮ್ಮ ಕರ್ತವ್ಯವನ್ನು ಮಾಡಿ, ಹಣಕಾಸಿನ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಕೇಂದ್ರ ಸರಕಾರಕ್ಕೆ ಸ್ಪಷ್ಟವಾಗಿ ಹೇಳಬೇಕು'' ಚಿದಂಬರಂ ಆಗ್ರಹಿಸಿದರು.

ಆರ್‌ಬಿಐ ಹೇಳಿಕೆಯ ನಂತರವೂ ಪ್ರಧಾನ ಮಂತ್ರಿ ಕಚೇರಿ ಅಥವಾ ನಿರ್ಮಲಾ ಸೀತಾರಾಮನ್ ಜಿಡಿಪಿಯ ಶೇ.1ಕ್ಕಿಂತ ಕಡಿಮೆ ಹಣಕಾಸು ಪ್ರಚೋದನೆ ಹೊಂದಿರುವ ಪ್ಯಾಕೇಜ್‌ಗಾಗಿ ತಮ್ಮನ್ನು ಶ್ಲಾಘಿಸುತ್ತಾರೆಯೇ?ಎಂದು ಚಿದಂಬರಂ ಕೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News