ದಿಲ್ಲಿ ಏಮ್ಸ್ ನ ಹಿರಿಯ ವೈದ್ಯ ಕೊರೋನ ವೈರಸ್ ಸೋಂಕಿನಿಂದ ಮೃತ್ಯು

Update: 2020-05-23 17:43 GMT

ಹೊಸದಿಲ್ಲಿ: ಕೊರೋನ ವೈರಸ್ ನಿಂದ ಬಳಲುತ್ತಿದ್ದ ದಿಲ್ಲಿಯ ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನ ಹಿರಿಯ ವೈದ್ಯರೊಬ್ಬರು ಇಂದು ನಿಧನರಾಗಿದ್ದಾರೆ.

ಕೊರೋನ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದ ಪ್ರೀಮಿಯರ್ ಆಸ್ಪತ್ರೆಯ ಮುಖ್ಯಸ್ಥರಾಗಿದ್ದರು ಮೃತ ಡಾ.ಜಿತೇಂದ್ರ ನಾಥ್ ಪಾಂಡೆ (78).

“ಡಾ,ಜೆ.ಎನ್. ಪಾಂಡೆ ಕೋವಿಡ್ 19 ನಿಂದ ನಿಧರನಾಗಿದ್ದು, ತೀವ್ರ ದುಃಖ ತಂದಿದೆ” ಎಂದು ದಿಲ್ಲಿಯ ಹಿರಿಯ ವೈದ್ಯೆ ಡಾ. ಸಂಗೀತಾ ರೆಡ್ಡಿ ಟ್ವೀಟ್ ಮಾಡಿದ್ದಾರೆ.

ಏಮ್ಸ್‌ನ ಆಹಾರ ಕ್ಯಾಂಟೀನ್‌ನ ಉದ್ಯೋಗಿಯೊಬ್ಬ ಕೊರೋನದಿಂದ ಸಾವಿಗೀಡಾದ ಮರುದಿನವೇ ಡಾ. ಪಾಂಡೆ ಅವರು ನಿಧನರಾಗಿದ್ದಾರೆ. ವೈದ್ಯರು ಹಾಗೂ ಆರೋಗ್ಯಪಾಲನಾ ಸಿಬ್ಬಂದಿಗೆ ಕೋವಿಡ್-19 ಸೋಂಕಿಗೆ ತುತ್ತಾಗುವುದರಿಂದ ರಕ್ಷಣೆ ನೀಡುವುದಕ್ಕಾಗಿ ತಾನು ಶಿಫಾರಸು ಮಾಡಿದ್ದ ಕ್ರಮಗಳನ್ನು ಇನ್ನೂ ಜಾರಿಗೆ ಬಂದಿಲ್ಲವೆಂದು ಏಮ್ಸ್‌ನ ರೆಸಿಡೆಂಟ್ ವೈದ್ಯರ ಸಂಘವು ಆಪಾದಿಸಿದೆ.

  ದೇಶ ಕೊರೋನವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಹಲವು ವೈದ್ಯರಿಗೆ ಸೋಂಕು ತಗಲಿದ ಹಲವು ಪ್ರಕರಣಗಳು ಹೊಸದಿಲ್ಲಿಯಲ್ಲಿ ಕಳೆದ ಕೆಲವು ವಾರಗಳಲ್ಲಿ ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News