ಸೋಮವಾರದಿಂದ ಮುಂಬೈನಲ್ಲಿ ದೇಶಿಯ ವಿಮಾನ ಹಾರಾಟಕ್ಕೆ ಅವಕಾಶ: ನವಾಬ್ ಮಲಿಕ್

Update: 2020-05-24 13:35 GMT

ಮುಂಬೈ,ಮೇ 24: ಸೋಮವಾರದಿಂದ ಮುಂಬೈನಿಂದ ಪ್ರತಿದಿನ 25 ದೇಶಿಯ ವಿಮಾನಗಳ ಆಗಮನ ಹಾಗೂ ನಿರ್ಗಮನಕ್ಕೆ ಅವಕಾಶ ನೀಡಲು ರಾಜ್ಯ ಸರಕಾರ ಒಪ್ಪಿಕೊಂಡಿದೆ ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ರವಿವಾರ ತಿಳಿಸಿದರು.

ವಿಮಾನ ಹಾರಾಟದ ಸಂಖ್ಯೆಯನ್ನು ನಿಧಾನವಾಗಿ ಹೆಚ್ಚಿಸಲಾಗುತ್ತದೆ. ಈ ಕುರಿತು ರಾಜ್ಯ ಸರಕಾರವು ವಿವರಣೆಯ ಜೊತೆಗೆ ಮಾರ್ಗಸೂಚಿಗಳನ್ನು ನೀಡಲಿದೆ ಎಂದು ಮಲಿಕ್ ಹೇಳಿದ್ದಾರೆ.

ಮುಂಬೈ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಟುವಟಿಕೆಗಳನ್ನು ಪುನರಾರಂಭಿಸಲು ಇನ್ನಷ್ಟು ಸಮಯ ಅಗತ್ಯವಿದ್ದು, ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದೊಂದಿಗೆ ನಾನು ಚರ್ಚಿಸುತ್ತೇನೆ. ಸೋಮವಾರದಿಂದ ಕನಿಷ್ಟ ಸಾಧ್ಯವಿರುವ ದೇಶಿಯ ವಿಮಾನ ಹಾರಾಟಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆ ನೀಡಿದ್ದರು. ಮುಖ್ಯಮಂತ್ರಿಯ ಹೇಳಿಕೆಯ ಕೆಲವೇ ಗಂಟೆಗಳ ಬಳಿಕ ನವಾಬ್ ಮಲಿಕ್ ದೇಶಿಯ ವಿಮಾನ ಹಾರಾಟದ ಪುನರಾರಂಭದ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News