×
Ad

ಹರ್ಯಾಣ: ಪಕ್ಷದ ಪ್ರಮುಖ ನಾಯಕನನ್ನು 6 ವರ್ಷಗಳ ಕಾಲ ಉಚ್ಛಾಟಿಸಿದ ಬಿಜೆಪಿ

Update: 2020-05-25 23:28 IST

ಹರ್ಯಾಣ: ರಾಜ್ಯದ ಪ್ರಮುಖ ಬಿಜೆಪಿ ನಾಯಕ ಪ್ರಕಾಶ್ ಕಥುರಿಯಾರನ್ನು 6 ವರ್ಷಗಳ ಕಾಲ ಬಿಜೆಪಿಯಿಂದ ಉಚ್ಛಾಟಿಸಲಾಗಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ಸುಭಾಷ್ ಬರಾಲ ಅವರು ನೀಡಿರುವ ಆದೇಶ ಪ್ರತಿಯಲ್ಲಿ ಕಥುರಿಯಾರನ್ನು ವಜಾಗೊಳಿಸಿದ ಕಾರಣವನ್ನು ತಿಳಿಸಿಲ್ಲ.

ವೈರಲ್ ಆಗಿದ್ದ ವಿಡಿಯೊ

ಅಪಾರ್ಟ್ ಮೆಂಟ್ ಒಂದರ ಬಾಲ್ಕನಿಯಿಂದ ಬಟ್ಟೆಯ ಸಹಾಯದಿಂದ ಇಳಿಯಲು ಯತ್ನಿಸುವಾಗ ಕಥುರಿಯಾ ಕೆಳಕ್ಕೆ ಬಿದ್ದಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

“ವಿಡಿಯೋ ಆಧಾರದಲ್ಲಿ ಅವರನ್ನು ಪಕ್ಷದಿಂದ ವಜಾಗೊಳಿಸಲಾಗಿದೆ. ವಿಡಿಯೋ ಅವರ ನಡತೆಯ ಬಗ್ಗೆ ಪ್ರಶ್ನೆಗಳೆನ್ನು ಎತ್ತಿದೆ” ಎಂದು ಬಿಜೆಪಿ ಕರ್ನಲ್ ಘಟಕದ ಅಧ್ಯಕ್ಷ ಜಗನ್ಮೋಹನ್ ಆನಂದ್ ತಿಳಿಸಿದ್ದಾರೆ.

ಕಟ್ಟಡದಿಂದ ಕೆಳಕ್ಕೆ ಬಿದ್ದ ಪರಿಣಾಮ ಕಥುರಿಯಾರ ಕಾಲಿಗೆ ಗಾಯಗಳಾಗಿವೆ. ಅವರನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.  ಅವರು ಬಾಲ್ಕನಿಯಿಂದ ಯಾವ ಕಾರಣಕ್ಕಾಗಿ ಹಾಗೆ ಇಳಿಯಲು ಯತ್ನಿಸಿದರು ಎನ್ನುವುದು ಇನ್ನೂ ಸ್ಪಷ್ಟಗೊಂಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News