ಚೀನಾದ ಕಠಿಣ ನೀತಿಯಿಂದ ಭಾರತದ ಮೇಲೆ ಪರಿಣಾಮ: ಅಮೆರಿಕದ ಹಿರಿಯ ರಾಜತಾಂತ್ರಿಕ

Update: 2020-05-28 17:28 GMT

ವಾಶಿಂಗ್ಟನ್, ಮೇ 28: ಚೀನಾದ ಹೊಸ ಕಠಿಣವಾಗಿ ವರ್ತಿಸುವ ನೀತಿಯು ಭಾರತ ಮತ್ತು ಇತರ ದೇಶಗಳೊಂದಿಗಿನ ಅದರ ಸಂಬಂಧದ ಮೇಲೆ ಪರಿಣಾಮ ಬೀರಲಿದೆ ಎಂದು ಪೂರ್ವ ಏಶ್ಯ ಮತ್ತು ಪೆಸಿಫಿಕ್ ವ್ಯವಹಾರಗಳಿಗಾಗಿನ ಅಮೆರಿಕದ ಸಹಾಯಕ ವಿದೇಶ ಕಾರ್ಯದರ್ಶಿ ಡೇವಿಡ್ ಸ್ಟಿಲ್‌ವೆಲ್ ಹೇಳಿದ್ದಾರೆ.

ಚೀನಾವು ಒಂದು ಮಾದರಿಯ ಸಮಸ್ಯಾತ್ಮಕ ಆಡಳಿತವನ್ನು ಹೇರುತ್ತಿದೆ ಎನ್ನುವುದನ್ನು ಜಗತ್ತು ಕೊನೆಗೂ ಅರ್ಥಮಾಡಿಕೊಳ್ಳುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವ್ಯಾಪಾರ, ನೋವೆಲ್-ಕೊರೋನ ವೈರಸ್ ಸಾಂಕ್ರಾಮಿಕದ ಮೂಲ, ಹಾಂಕಾಂಗ್‌ನಲ್ಲಿ ಚೀನಾ ಜಾರಿಗೆ ತರಲಿರುವ ನೂತನ ಭದ್ರತಾ ಕಾಯಿದೆ ಮತ್ತು ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಕಮ್ಯುನಿಸ್ಟ್ ಚೀನಾದ ಆಕ್ರಮಣಕಾರಿ ಸೇನಾ ಚಟುವಟಿಕೆಗಳ ವಿಷಯದಲ್ಲಿ ಅಮೆರಿಕವು ಪ್ರಸಕ್ತ ಚೀನಾದೊಂದಿಗೆ ಜಂಗಿಕುಸ್ತಿಯಲ್ಲಿ ತೊಡಗಿದೆ.

ಚೀನಾದ ಕೃತ್ಯಗಳು ಸಾಗರದಾಚೆ ಮಾತ್ರವಲ್ಲ, ಆಗ್ನೇಯ ಏಶ್ಯದ ಮೇಲೂ ಪರಿಣಾಮ ಬೀರುತ್ತವೆ. ಅದರ ಕೃತ್ಯಗಳು ನೆರೆಯ ಭಾರತ ಮತ್ತು ಇತರ ದೇಶಗಳ ಮೇಲೂ ಪರಿಣಾಮ ಬೀರುತ್ತವೆ. ಚೀನಾದ ಈ ಹೊಸ ಕಠಿಣ ಹಾಗೂ ಆಕ್ರಮಣಕಾರಕ ನೀತಿಯು ರಕ್ಷಣಾ ಸಚಿವರ ಕೆಲಸವನ್ನು ಇನ್ನಷ್ಟು ಕಠಿಣಗೊಳಿಸುತ್ತದೆ ಎಂದು ಬುಧವಾರ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಸ್ಟಿಲ್‌ವೆಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News