ಉಪಕರಣಗಳ ಖರೀದಿಗೆ ವ್ಯಯಿಸಿದ ಮೊತ್ತದ ವಿವರ ನೀಡಲು ನಿರಾಕರಿಸಿದ ಆರೋಗ್ಯ ಸಚಿವಾಲಯ

Update: 2020-05-29 14:09 GMT

ಹೊಸದಿಲ್ಲಿ: ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಸಾಮಗ್ರಿಗಳನ್ನು ಖರೀದಿಸಲು ವೆಚ್ಚವಾದ ಹಣದ ಮೊತ್ತವನ್ನು ಬಹಿರಂಗಪಡಿಸಲುಲ ಕೇಂದ್ರ ಆರೋಗ್ಯ ಸಚಿವಾಲಯ ನಿರಾಕರಿಸಿದೆ. ಆರ್ ಟಿಐ ಕಾಯ್ದೆಯಲ್ಲಿ ‘ಮಾಹಿತಿ’ ಎಂಬರ್ಥದಲ್ಲಿ ಇಂತಹ ಅಂಕಿ ಅಂಶಗಳು ಬರುವುದಿಲ್ಲ ಎಂದು ಅದು ಹೇಳಿದೆ.

ಕೊರೋನ ವೈರಸ್ ತಡೆಯುವುದಕ್ಕಾಗಿ ಕೇಂದ್ರ ಸರಕಾರ ಕೈಗೊಂಡ ಕ್ರಮಗಳ  ಬಗ್ಗೆ ಮಾಹಿತಿ ಕೋರಿ ಮುಂಬೈ ಮೂಲದ ಆರ್ ಟಿಐ ಕಾರ್ಯಕರ್ತ ಅನಿಲ್ ಗಲ್ಗಲಿ ಆರ್ ಟಿಐ ಅರ್ಜಿ ಸಲ್ಲಿಸಿದ್ದರು. ಉಪಕರಣಗಳ ಹೆಸರು ಮತ್ತು ಖರೀದಿಸಿದ ವಸ್ತುಗಳು ಮತ್ತು ಅದಕ್ಕಾಗಿ ವ್ಯಯಿಸಿದ ಹಣದ ಬಗ್ಗೆ ಅವರು ಮಾಹಿತಿ ಕೋರಿದ್ದರು.

ಅರ್ಜಿ ಸಲ್ಲಿಸಿದ 22 ದಿನಗಳ ನಂತರ ಅವರಿಗೆ ಈ ಉತ್ತರ ಲಭಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News