ನಾವು ಎಲ್ಲ ವಿಷಯಗಳನ್ನೂ ಗಂಭೀರವಾಗಿ ನೋಡುತ್ತೇವೆ: ತಬ್ಲೀಗಿ ಕುರಿತು ಸುಳ್ಳುಸುದ್ದಿ ಬಗ್ಗೆ ಸುಪ್ರೀಂ

Update: 2020-05-29 18:01 GMT

ಹೊಸದಿಲ್ಲಿ, ಮೇ 29: ‘ಮಾಧ್ಯಮಗಳ ಒಂದು ವರ್ಗವು ದಿಲ್ಲಿಯ ನಿಝಾಮುದ್ದೀನ್‌ನಲ್ಲಿ ನಡೆದಿದ್ದ ತಬ್ಲೀಗಿ ಜಮಾಅತ್ ಸಮಾವೇಶಕ್ಕೆ ಸಂಬಂಧಿಸಿದಂತೆ ಮುಸ್ಲಿಮ್ ಸಮುದಾಯವನ್ನು ರಾಕ್ಷಸೀಕರಿಸುತ್ತಿದೆ’ ಎಂದು ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿಗಳಲ್ಲಿ ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಷನ್ (ಎನ್‌ಬಿಎ) ಅನ್ನು ಕಕ್ಷಿಯಾಗಿ ಸೇರಿಸುವಂತೆ ನಿರ್ದೇಶ ನೀಡಿರುವ ಸರ್ವೋಚ್ಚ ನ್ಯಾಯಾಲಯವು,‘ನಾವು ಎಲ್ಲ ವಿಷಯಗಳನ್ನೂ ಗಂಭೀರವಾಗಿ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದೆ.

ಬುಧವಾರ ಜಮೀಯತ್ ಉಲೆಮಾ-ಇ-ಹಿಂದ್ (ಜೆಯುಎಚ್) ಪರ ವಕೀಲ ಹೃಷಿಕೇಶ ರಾಯ್ ಅವರು ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ಆಗ್ರಹಿಸಿದಾಗ ಈ ಮಾತನ್ನು ಹೇಳಿದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ಪೀಠವು,ಈ ವಿಷಯಗಳೆಲ್ಲ ಗಂಭೀರ ಎಂದು ಪದೇ ಪದೇ ಹೇಳುತ್ತಿರಬೇಡಿ ಎಂದು ತಿಳಿಸಿತು.

ಕೇಂದ್ರ ಮತ್ತು ಭಾರತೀಯ ಪತ್ರಿಕಾ ಮಂಡಳಿಗೆ ನೋಟಿಸ್‌ಗಳನ್ನು ಹೊರಡಿಸಿದ ಪೀಠವು ಎರಡು ವಾರಗಳಲ್ಲಿ ಉತ್ತರಿಸುವಂತೆ ನಿರ್ದೇಶ ನೀಡಿತು. ಮುಂದಿನ ವಿಚಾರಣೆಯು ಜೂ.15ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News