ಬ್ರಿಟನ್: ಅಕ್ರಮ ಹಣ ವರ್ಗಾವಣೆ; ಇಬ್ಬರು ಭಾರತೀಯರಿಗೆ ಜೈಲು

Update: 2020-05-30 16:58 GMT

ಲಂಡನ್, ಮೇ 30: ಅಕ್ರಮ ಹಣ ವರ್ಗಾವಣೆಯಲ್ಲಿ ಶಾಮೀಲಾಗಿರುವ ಆರೋಪದಲ್ಲಿ ಇಬ್ಬರು ಭಾರತೀಯರಿಗೆ ಬ್ರಿಟನ್‌ನ ನ್ಯಾಯಾಲಯವೊಂದು ಶುಕ್ರವಾರ ಒಟ್ಟು 12 ವರ್ಷ ಮತ್ತು 9 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

32 ವರ್ಷದ ವಿಜಯ ಕುಮಾರ್ ಕೃಷ್ಣಸಾಮಿ ಮತ್ತು 44 ವರ್ಷದ ಚಂದ್ರಶೇಖರ ನಲ್ಲಯನ್ ಶಿಕ್ಷೆಗೊಳಗಾದವರು. ಅವರ ವಿರುದ್ಧದ ಆರೋಪಗಳ ವಿಚಾರಣೆಯನ್ನು ಸ್ಕಾಟ್‌ಲ್ಯಾಂಡ್ ಯಾರ್ಡ್‌ನ ಆರ್ಥಿಕ ಅಪರಾಧ ಘಟಕವು ನಡೆಸಿತ್ತು.

ನ್ಯಾಯಾಲಯವು ವಿಜಯ ಕುಮಾರ್ ಕೃಷ್ಣಸಾಮಿಗೆ 5 ವರ್ಷ 9 ತಿಂಗಳ ಜೈಲುವಾಸ ವಿಧಿಸಿದರೆ, ಚಂದ್ರಶೇಖರ ನಲ್ಲಯನ್‌ಗೆ 7 ವರ್ಷಗಳ ಶಿಕ್ಷೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News