ಚೀನಾದ ಏಕಸ್ವಾಮ್ಯ ಧಿಕ್ಕರಿಸಿ ದಕ್ಷಿಣ ಚೀನಾ ಸಮುದ್ರದಲ್ಲಿ ಹಾದು ಹೋದ ಅಮೆರಿಕ ಯುದ್ಧ ನೌಕೆ

Update: 2020-05-30 17:01 GMT
ಫೈಲ್ ಚಿತ್ರ

ವಾಶಿಂಗ್ಟನ್, ಮೇ 30: ಅತ್ಯಂತ ವಿವಾದಾಸ್ಪದ ದಕ್ಷಿಣ ಚೀನಾ ಸಮುದ್ರ ತನಗೆ ಸೇರಿದ್ದು ಎನ್ನುವ ಚೀನಾದ ನಿಲುವನ್ನು ಧಿಕ್ಕರಿಸಿ ಅಮೆರಿಕ ನೌಕಾಪಡೆಯ ಕ್ಷಿಪಣಿ ನಾಶಕ ಯುದ್ಧನೌಕೆ ಯುಎಸ್‌ಎಸ್ ಮಸ್ಟಿನ್ ಗುರುವಾರ ಪ್ಯಾರಾಸೆಲ್ ದ್ವೀಪಗಳ ಸಮೀಪದಲ್ಲಿ ಹಾದು ಹೋಗಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ.

ಮೇ 28 (ಸ್ಥಳೀಯ ಸಮಯ)ರಂದು ಯುಎಸ್‌ಎಸ್ ಮಸ್ಟಿನ್ ಯುದ್ಧ ನೌಕೆಯು ಪ್ಯಾರಾಸೆಲ್ ದ್ವೀಪಗಳಲ್ಲಿ ನೌಕಾಯಾನ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಸ್ಥಾಪಿಸಿದೆ. ಇದು ಅಂತರ್‌ರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿಯೇ ಇದೆ ಎಂದು ಅಮೆರಿಕ ನೌಕಾಪಡೆಯ 7ನೇ ದಳ (ಫ್ಲೀಟ್)ದ ವಕ್ತಾರ ಲೆಫ್ಟಿನೆಂಟ್ ಅಂತೋನಿ ಜಂಕೊ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ ಎಂದು ಸಿಎನ್‌ಎನ್ ಹೇಳಿದೆ.

ನಾವು ಹಾದು ಹೋಗಿರುವ ಜಲ ಪ್ರದೇಶವು ಚೀನಾ ಕಾನೂನಿಗನುಗುಣವಾಗಿ ತನ್ನದೆಂದು ಹೇಳಿಕೊಳ್ಳುವ ಜಲಪ್ರದೇಶಕ್ಕಿಂತ ದೂರದಲ್ಲಿದೆ ಎಂದು ಹೇಳಿಕೆ ತಿಳಿಸಿದೆ.

ಪ್ಯಾರಾಸೆಲ್ ದ್ವೀಪವು ತಮಗೆ ಸೇರಿದ್ದೆಂದು ಚೀನಾ, ವಿಯೆಟ್ನಾಮ್ ಮತ್ತು ತೈವಾನ್‌ಗಳು ಹೇಳಿಕೊಳ್ಳುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News