ಅಮೆರಿಕನ್ನರ ವಿರುದ್ಧವೇ ಸೇನೆ ಬಳಸುತ್ತಿರುವ ಟ್ರಂಪ್: ಜೋ ಬೈಡನ್ ಆಕ್ರೋಶ

Update: 2020-06-02 17:19 GMT

ವಾಶಿಂಗ್ಟನ್, ಜೂ. 2: ‘‘ಅಮೆರಿಕದ ಸೇನೆಯನ್ನು ಅಮೆರಿಕದ ಜನರ ವಿರುದ್ಧವೇ ಬಳಸುತ್ತಿರುವುದಕ್ಕಾಗಿ’’ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಸೋಮವಾರ ಖಂಡಿಸಿದ್ದಾರೆ.

ಅಮೆರಿಕದಾದ್ಯಂತ ವ್ಯಾಪಿಸುತ್ತಿರುವ ಜನಾಂಗೀಯ ತಾರತಮ್ಯ ವಿರೋಧಿ ಪ್ರತಿಭಟನೆಗಳನ್ನು ಹತ್ತಿಕ್ಕಲು ಸೈನಿಕರನ್ನು ನಿಯೋಜಿಸುವುದಾಗಿ ಟ್ರಂಪ್ ಘೋಷಿಸಿದ ಬಳಿಕ ಬೈಡನ್ ಈ ಹೇಳಿಕೆ ನೀಡಿದ್ದಾರೆ.

‘‘ಅವರು ಶಾಂತಿಯುತ ಪ್ರತಿಭಟನಕಾರರ ಮೇಲೆ ಅಶ್ರುವಾಯು ಪ್ರಯೋಗಿಸಿದರು ಮತ್ತು ರಬ್ಬರ್ ಗುಂಡುಗಳನ್ನು ಹಾರಿಸಿದರು. ಇದೆಲ್ಲವನ್ನು ಅವರು ಫೋಟೊ ತೆಗೆಸಿಕೊಳ್ಳುವುದಕ್ಕಾಗಿ ಮಾಡಿದರು. ಇದರಿಂದಾಗಿ ಶ್ವೇತಭವನದ ಸಮೀಪದಲ್ಲಿ ಹಾನಿಗೀಡಾದ ಚರ್ಚೊಂದಕ್ಕೆ ಭೇಟಿ ನೀಡಿ ಫೋಟೊ ತೆಗೆಸಲು ಅವರಿಗೆ ಸಾಧ್ಯವಾಯಿತು’’ ಎಂದು ಬೈಡನ್ ಟ್ವೀಟ್ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News