2020 ಯುಎಸ್ ಓಪನ್ ನಡೆಯುವುದು ಖಚಿತವಾಗಿಲ್ಲ: ನಡಾಲ್

Update: 2020-06-05 04:46 GMT

ಬಾರ್ಸಿಲೋನ, ಜೂ.4: ಯುಎಸ್ ಓಪನ್ 2020ರಲ್ಲಿ ನಡೆಯುವುದು ಅನುಮಾನ ಎಂದು ಸ್ಪೇನ್‌ನ ಟೆನಿಸ್ ತಾರೆ ರಫೆಲ್ ನಡಾಲ್ ಹೇಳಿದ್ದಾರೆ.

ನಡಾಲ್ 20ನೇ ಗ್ರಾನ್‌ಸ್ಲಾಮ್ ಪ್ರಶಸ್ತಿ ಗೆಲುವಿಗಾಗಿ ತಯಾರಿ ಯಲ್ಲಿದ್ದಾರೆ. ತನ್ನ ತವರು ಸ್ಪೇನ್‌ನಲ್ಲಿ ಲಘ ಅಭ್ಯಾಸದಲ್ಲಿ ತೊಡಗಿದ್ದಾರೆ.

 ‘‘ ಮುಂದಿನ ಗ್ರಾನ್ ಸ್ಲಾಮ್ ಪಂದ್ಯಾವಳಿ ಯುಎಸ್ ಓಪನ್ ನಡೆಯುತ್ತದೆಯೇ ಎಂದು ನೀವು ಇಂದು ನನ್ನನ್ನು ಕೇಳಿದರೆ, ನಾನು ಇಲ್ಲ ಎಂದು ಹೇಳುತ್ತೇನೆ ’’ ಎಂದರು

ಗುರುವಾರ ವೀಡಿಯೊ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಅವರು ಕೊರೋನ ವೈರಸ್ ಸೋಂಕು ಯಾವಾಗ ನಿಯಂತ್ರಣಕ್ಕೆ ಬರುತ್ತದೆ. ನ್ಯೂಯಾರ್ಕ್‌ನಲ್ಲಿ ಪರಿಸ್ಥಿತಿ ಹೇಗೆ ಇರಲಿದೆ ಎನ್ನುವುದು ಗೊತ್ತಿಲ್ಲ. ವೈರಸ್‌ನಿಂದ ತೀವ್ರವಾಗಿ ಹಾನಿಗೊಳಗಾದ ಸ್ಥಳಗಳಲ್ಲಿ ನ್ಯೂಯಾರ್ಕ್ ಕೂಡಾ ಒಂದಾಗಿದೆ ಎಂದು ಹೇಳಿದರು.

   ಆರೋಗ್ಯದ ದೃಷ್ಟಿಯಿಂದ ಪರಿಸ್ಥಿತಿ ಸಂಪೂರ್ಣವಾಗಿ ಸುರಕ್ಷಿತವಾಗುವವರೆಗೆ ನಾವು ವಾಪಸಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಪ್ರತಿಯೊಂದು ದೇಶದ ಆಟಗಾರರು ಸುರಕ್ಷಿತ ಸಂದರ್ಭಗಳಲ್ಲಿ ಮಾತ್ರ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಪ್ರಯಾಣಿಸಬಹುದು ಎಂದರು. ಕೋವಿಡ್-19 ಕಾರಣದಿಂದಾಗಿ ಟೆನಿಸ್ ಸೇರಿದಂತೆ ಹೆಚ್ಚಿನ ಕ್ರೀಡೆಗಳನ್ನು ಮಾರ್ಚ್‌ನಿಂದ ತಡೆಹಿಡಿಯಲಾಗಿದೆ. ಎಟಿಪಿ ಮತ್ತು ಡಬ್ಲುಟಿಎ ಪ್ರವಾಸಗಳನ್ನು ಕನಿಷ್ಠ ಜುಲೈ ಅಂತ್ಯದವರೆಗೆ ಸ್ಥಗಿತಗೊಳಿಸಲಾಗಿದೆ. 75 ವರ್ಷಗಳಲ್ಲಿ ಮೊದಲ ಬಾರಿಗೆ ವಿಂಬಲ್ಡನ್ ರದ್ದುಗೊಂಡಿದೆ.

 34ನೇ ವರ್ಷಕ್ಕೆ ಕಾಲಿಟ್ಟ ನಡಾಲ್ ಕಳೆದ ಎರಡು ತಿಂಗಳಿನಿಂದ ಟೆನಿಸ್‌ನಿಂದ ದೂರ ಉಳಿದಿದ್ದರು. ಬುಧವಾರ ಅವರು ಲಘು ಅಭ್ಯಾಸ ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News