ಅಕ್ಟೋಬರ್ 8ರಂದು ಖತರ್ ವಿರುದ್ಧ ಭಾರತದ ವಿಶ್ವಕಪ್ ಅರ್ಹತಾ ಫುಟ್ಬಾಲ್ ಪಂದ್ಯ

Update: 2020-06-07 06:19 GMT

ಹೊಸದಿಲ್ಲಿ: ಭಾರತೀಯ ಫುಟ್ಬಾಲ್ ತಂಡದ ಏಶ್ಯನ್ ಚಾಂಪಿಯನ್ ಖತರ್ ವಿರುದ್ಧದ ಮುಂದೂಡಿಕೆಯಾಗಿದ್ದ 2022ರ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯವನ್ನು ಅಕ್ಟೋಬರ್ 8ರಂದು ಮರು ನಿಗದಿಪಡಿಸಲಾಗಿದೆ ಎಂದು ಶುಕ್ರವಾರ ಪ್ರಕಟಿಸಲಾಗಿದೆ.

ಖತರ್ ವಿರುದ್ಧ ಆಡಿದ ಬಳಿಕ ಭಾರತೀಯ ಫುಟ್ಬಾಲ್ ತಂಡವು ನವೆಂಬರ್ 12ರಂದು ಬಾಂಗ್ಲಾದೇಶ ವಿರುದ್ಧ ವಿದೇಶಿ ನೆಲದಲ್ಲಿ ಆಡಲಿದೆ. ನವೆಂಬರ್ 17ರಂದು ಅಫ್ಘಾನಿಸ್ತಾನ ವಿರುದ್ಧ ತನ್ನ ದೇಶದಲ್ಲಿ ಮತ್ತೊಂದು ಪಂದ್ಯ ಆಡಲಿದೆ.

ಏಶ್ಯನ್ ಫುಟ್ಬಾಲ್ ಕಾನ್ಫಡರೇಶನ್(ಎಎಫ್‌ಸಿ) ಫಿಫಾದೊಂದಿಗೆ ಸಮಾಲೋಚಿಸಿದ ಬಳಿಕ ಫಿಫಾ ವಿಶ್ವಕಪ್ ಖತರ್ 2022 ಹಾಗೂ ಎಎಫ್‌ಸಿ ಏಶ್ಯನ್ ಕಪ್ ಚೀನಾ 2023 ಏಶ್ಯನ್ ಕ್ವಾಲಿಫೈಯರ್‌ಗಳಲ್ಲಿ ಎರಡನೇ ಸುತ್ತಿನ ಉಳಿದ ಪಂದ್ಯಗಳಿಗೆ ಪ್ರಸ್ತಾವಿತ ಪಂದ್ಯದ ದಿನಾಂಕಗಳನ್ನು ಘೋಷಿಸಿತು. ಈ ಎಲ್ಲ ಪಂದ್ಯಗಳು ಮಾರ್ಚ್‌ನಲ್ಲಿ ನಡೆಯಬೇಕಾಗಿತ್ತು. ಆದರೆ ಕೋವಿಡ್-19 ಸಾಂಕ್ರಾ ಮಿಕ ಕಾಯಿಲೆಯಿಂದಾಗಿ ಮುಂದೂ ಡಿಕೆಯಾಗಿದ್ದವು.

 ‘‘ಮಾರ್ಚ್ 7 ಹಾಗೂ 8ರಲ್ಲಿ ನಿಗದಿಯಾಗಿದ್ದ ಪಂದ್ಯಗಳು ಕ್ರಮವಾಗಿ 2020ರ ಅಕ್ಟೋಬರ್ 8 ಹಾಗೂ 13ರಲ್ಲಿ ನಡೆಯಲಿವೆ. ಮಾರ್ಚ್ 9 ಹಾಗೂ 10ರಂದು ನಡೆಯಬೇಕಾಗಿದ್ದ ಪಂದ್ಯಗಳು 2020ರ ನವೆಂಬರ್ 12 ಹಾಗೂ 17 ರಂದು ನಡೆಯುತ್ತವೆ’’ಎಂದು ಎಎಫ್‌ಸಿ ಪ್ರಕಟನೆಯೊಂದರಲ್ಲಿ ತಿಳಿಸಿದೆ.

 ಭಾರತವು ಈಗಾಗಲೆ 2022ರ ಫಿಫಾ ವಿಶ್ವಕಪ್‌ನಲ್ಲಿ ಸ್ಥಾನಗಿಟ್ಟಿಸಿಕೊಳ್ಳುವ ಸ್ಪರ್ಧೆಯಿಂದ ಹೊರ ಬಿದ್ದಿದೆ. ಆದರೆ, 2023ರ ಎಎಫ್‌ಸಿ ಏಶ್ಯನ್ ಕಪ್‌ನಲ್ಲಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದೆ.

ತಂಡಗಳು, ಅಧಿಕಾರಿಗಳು, ಅಭಿಮಾನಿಗಳು ಹಾಗೂ ಭಾಗಿದಾರರು, ಸರಕಾರದ ಪ್ರಯಾಣ ಹಾಗೂ ವೈದ್ಯಕೀಯ ನಿರ್ಬಂಧಗಳನ್ನು ಖಚಿತಪಡಿಸಿಕೊಳ್ಳಲು ಪರಿಸ್ಥಿತಿಯನ್ನು ನಿಕಟವಾಗಿ ಅಧ್ಯಯನ ನಡೆಸುತ್ತಿದ್ದೇವೆ ಎಂದು ಎಎಫ್‌ಸಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News