ನನ್ನ ಅಣ್ಣನನ್ನು ಹೊಡೆದು ಕೊಂದರು: ಅಮೆರಿಕ ಸಂಸತ್ತಿನಲ್ಲಿ ಜಾರ್ಜ್ ಫ್ಲಾಯ್ಡ್ ತಮ್ಮ ಹೇಳಿಕೆ

Update: 2020-06-11 16:28 GMT
ಫಿಲೊನೈಸ್ ಫ್ಲಾಯ್ಡ್

ವಾಶಿಂಗ್ಟನ್, ಜೂ. 11: ನನ್ನ ಸಹೋದರನ ಸಾವು ವ್ಯರ್ಥವಾಗಲು ಸಂಸದರು ಬಿಡಬಾರದು ಎಂದು ಬಿಳಿಯ ಪೊಲೀಸ್ ಅಧಿಕಾರಿಯ ಕೈಯಲ್ಲಿ ಸಾವಿಗೀಡಾಗಿರುವ ಕರಿಯ ಜಾರ್ಜ್ ಫ್ಲಾ ಯ್ಡ್  ರ ತಮ್ಮ ಬುಧವಾರ ಅಮೆರಿಕದ ಸಂಸತ್ತು ಕಾಂಗ್ರೆಸ್‌ನಲ್ಲಿ ಮಾತನಾಡುತ್ತಾ ಮನವಿ ಮಾಡಿದರು.

‘‘ನನ್ನ ಅಣ್ಣ 20 ಡಾಲರ್‌ಗೆ ಸಾಯಬೇಕಾಗಿರಲಿಲ್ಲ’’ ಎಂದು ಹೇಳಿದ ಅವರು, ನನ್ನ ಸಹೋದರನನ್ನು ಹೊಡೆದು ಸಾಯಿಸಲಾಗಿದೆ ಎಂದರು.

ಜಾರ್ಜ್ ಫ್ಲಾ ಯ್ಡ್ ಸಾವಿನ ಹಿನ್ನೆಲೆಯಲ್ಲಿ, ದೇಶದಲ್ಲಿನ ಜನಾಂಗೀಯ ತಾರತಮ್ಯ ಮತ್ತು ಪೊಲೀಸ್ ದೌರ್ಜನ್ಯ ಆರೋಪಗಳ ಬಗ್ಗೆ ಪರಿಶೀಲನೆ ನಡೆಸುವ ಮೊದಲ ಸಂಸದೀಯ ವಿಚಾರಣೆಯನ್ನು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ನ್ಯಾಯಾಂಗ ಸಮಿತಿಯು ಕೈಗೆತ್ತಿಕೊಂಡಿದೆ.

ಫ್ಲಾಯ್ಡ್ ಸಾವಿನ ಬಳಿಕ ಅಮೆರಿಕ ಮತ್ತು ವಿದೇಶಗಳಲ್ಲಿ ಬೃಹತ್ ಪ್ರಮಾಣದಲ್ಲಿ ಜನಾಂಗೀಯ ತಾರತಮ್ಯ ವಿರೋಧಿ ಪ್ರತಿಭಟನೆಗಳು ನಡದಿವೆ.

‘‘ಅವರು ಎಲ್ಲ ಸೇರಿ ನನ್ನ ಸಹೋದರನನ್ನು ಹೊಡೆದು ಕೊಂದರು. ಅದು ಹಾಡುಹಗಲೇ ನಡೆದ ಆಧುನಿಕ ಕಾಲದ ಹೊಡೆದು ಕೊಲ್ಲುವ ಹತ್ಯೆಯಾಗಿದೆ’’ ಎಂದು ಟೆಕ್ಸಾಸ್ ರಾಜ್ಯದ ಮಿಝೂರಿ ನಗರದ ಫಿಲೊನೈಸ್ ಫ್ಲಾಯ್ಡ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News