ಪಾಕ್ ಮಾಜಿ ಪ್ರಧಾನಿ ಯೂಸುಫ್ ರಝಾ ಗಿಲಾನಿಗೆ ಕೊರೋನ ಸೋಂಕು
Update: 2020-06-13 22:31 IST
ಇಸ್ಲಾಮಾಬಾದ್, ಜೂ. 13: ಪಾಕಿಸ್ತಾನದ ಮಾಜಿ ಪ್ರಧಾನಿ ಯೂಸುಫ್ ರಝಾ ಗಿಲಾನಿಗೆ ಕೊರೋನ ವೈರಸ್ ಸೋಂಕಿರುವುದು ಶನಿವಾರ ದೃಢಪಟ್ಟಿದೆ.
ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ವಿಚಾರಣೆ ಎದುರಿಸಲು ನ್ಯಾಶನಲ್ ಅಕೌಂಟಬಿಲಿಟಿ ಬ್ಯೂರೋದ ಕಚೇರಿಗೆ ಹಾಜರಾದ ಬಳಿಕ 67 ವರ್ಷದ ಗಿಲಾನಿ ಮಾರಕ ಸೋಂಕಿಗೆ ಒಳಗಾಗಿದ್ದಾರೆ.
ಪಾಕಿಸ್ತಾನದ ಪ್ರತಿಪಕ್ಷ ಪಾಕಿಸ್ತಾನ ಮುಸ್ಲಿಮ್ ಲೀಗ್-ನವಾಝ್ (ಪಿಎಂಎಲ್-ಎನ್) ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಪ್ರಧಾನಿ ನವಾಝ್ ಶರೀಫ್‌ರ ತಮ್ಮ ಶೆಹ್ಬಾಝ್ ಶರೀಫ್ ಕೂಡ ನ್ಯಾಶನಲ್ ಅಕೌಂಟಬಿಲಿಟಿ ಬ್ಯೂರೋದ ಕಚೇರಿಗೆ ಹಾಜರಾದ ಬಳಿಕ ಗುರುವಾರ ಕೊರೋನ ವೈರಸ್ ಸೋಂಕಿಗೆ ಒಳಗಾಗಿದ್ದರು
‘‘ಧನ್ಯವಾದಗಳು ಇಮ್ರಾನ್ ಖಾನ್ ಸರಕಾರ ಮತ್ತು ನ್ಯಾಶನಲ್ ಅಕೌಂಟಬಿಲಿಟಿ ಬ್ಯೂರೋ!, ನೀವು ನನ್ನ ತಂದೆಯ ಜೀವವನ್ನು ಯಶಸ್ವಿಯಾಗಿ ಅಪಾಯಕ್ಕೆ ಗುರಿಪಡಿಸಿದ್ದೀರಿ. ಅವರು ಈಗ ಕೊರೋನ ವೈರಸ್ ಸೋಂಕಿಗೆ ಒಳಗಾಗಿದ್ದಾರೆ’’ ಎಂದು ಗಿಲಾನಿಯ ಮಗ ಕಾಸಿಮ್ ಗಿಲಾನಿ ಟ್ವಿಟರ್‌ನಲ್ಲಿ ಹೇಳಿದ್ದಾರೆ.