ಪಾಕ್‌ನಲ್ಲಿ ಒಂದೇ ದಿನ 6825 ಮಂದಿಗೆ ಕೊರೋನ: ಸೋಂಕಿತರ ಒಟ್ಟು ಸಂಖ್ಯೆ 1.39 ಲಕ್ಷಕ್ಕೇರಿಕೆ

Update: 2020-06-14 17:11 GMT

 ಇಸ್ಲಾಮಾಬಾದ್,ಜೂ.14: ಪಾಕಿಸ್ತಾನದಲ್ಲಿ ಕೊರೋನ ವೈರಸ್‌ ಸೋಂಕು ಕಾಡ್ಗಿಚ್ಚಿನಂತೆ ಹರಡುತ್ತಿದ್ದು, ಶನಿವಾರ ಒಂದೇ ದಿನ 6825 ಮಂದಿಗೆ ಕೊರೋನ ತಗಲಿರುವುದು ದೃಢಪಟ್ಟಿದೆ. ಇದು ಆ ದೇಶದಲ್ಲಿ ಒಂದು ದಿನದಲ್ಲಿ ಪತ್ತೆಯಾದ ಸೋಂಕಿನ ಪ್ರಕರಣಗಳ ಗರಿಷ್ಠ ಸಂಖ್ಯೆಯಾಗಿದೆ. ಪಾಕಿಸ್ತಾನದಲ್ಲಿ ಈಗ ಕೊರೋನ ಸೋಂಕು ಪೀಡಿತರ ಒಟ್ಟು ಸಂಖ್ಯೆ 1.39 ಲಕ್ಷಕ್ಕೇರಿದೆ.

 ಕಳೆದ 24 ತಾಸುಗಳಲ್ಲಿ ಪಾಕಿಸ್ತಾನದಲ್ಲಿ 80 ಮಂದಿ ಕೊರೋನಾದಿಂದ ಸಾವನ್ನಪ್ಪಿದ್ದು, ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 2632ಕ್ಕೇರಿದೆಯೆಂದು ರಾಷ್ಟ್ರೀಯ ಆರೋಗ್ಯ ಸೇವೆಗಳ ಸಚಿವಾಲಯ ತಿಳಿಸಿದೆ. ಪಾಕಿಸ್ತಾನದ ಎರಡು ಅತಿ ದೊಡ್ಡ ಪ್ರಾಂತಗಳಾದ ಪಂಜಾಬ್ ಹಾಗೂ ಸಿಂಧ್ ಪ್ರಾಂತಗಳಲ್ಲಿ ಕೊರೋನ ಸೋಂಕಿತರ ಸಂಖ್ಯೆ ತಲಾ 50 ಸಾವಿರವನ್ನು ದಾಟಿದೆಯೆಂದು ಆರೋಗ್ಯ ಸೇವೆಗಳ ಸಚಿವಾಲಯ ತಿಳಿಸಿದೆ.

  ಖೈಬರ್ ಪಖ್ತೂನ್‌ಖ್ವಾದಲ್ಲಿ 17,450, ಬಲೂಚಿಸ್ತಾನದಲ್ಲಿ 8028, ಇಸ್ಲಾಮಾಬಾದ್‌ ನಲ್ಲಿ 7934, ಗಿಲ್ಗಿಟ್-ಬಾಲ್ಟಿಸ್ತಾನ 1095 ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 604 ಸೋಂಕಿನ ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News