ಜಮ್ಮು-ಕಾಶ್ಮೀರ: 24 ಗಂಟೆಯಲ್ಲಿ 8 ಉಗ್ರರು ಹತ

Update: 2020-06-19 07:20 GMT

  ಶ್ರೀನಗರ,ಜೂ.19: ಜಮ್ಮು-ಕಾಶ್ಮೀರದ ಶೋಪಿಯಾನ್ ಹಾಗೂ ಪಾಂಪೋರ್‌ನಲ್ಲಿ ಶುಕ್ರವಾರ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್ ಘಟನೆಯಲ್ಲಿ 6 ಮಂದಿ ಉಗ್ರಗಾಮಿಗಳು ಹತರಾಗಿದ್ದಾರೆ. ಈ ಮೂಲಕ ಕಳೆದ 24 ಗಂಟೆಯಲ್ಲಿ ನಡೆದಿರುವ ಕಾರ್ಯಾಚರಣೆಯಲ್ಲಿ ಒಟ್ಟು ಎಂಟು ಉಗ್ರರು ಹತರಾಗಿದ್ದಾರೆ ಎಂದು ವರದಿಯಾಗಿದೆ.

ಪಾಂಪೋರ್‌ನಲ್ಲಿ ಇಬ್ಬರು ಹಾಗೂ ಶೋಪಿಯಾನ್‌ನಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ.

 ಪಾಂಪೋರ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಸಿಬ್ಬಂದಿಗಳು ಮಸೀದಿಯೊಳಗೆ ಕೂಡಿಹಾಕಿದ್ದ ಇಬ್ಬರು ಉಗ್ರರನ್ನು ಹೊರಹಾಕಿದ್ದಾರೆ. ಭದ್ರತಾ ಪಡೆಗಳು ಶುಕ್ರವಾರ ಮಸೀದಿಯನ್ನು ಸುತ್ತುವರಿದು ಇಬ್ಬರನ್ನು ಉಗ್ರರನ್ನು ಕೊಂದಿದ್ದಾರೆ. ಈ ವೇಳೆ ಐಇಡಿಯನ್ನು ಬಳಸಲಾಗಿಲ್ಲ ಎಂದು ಕಾಶ್ಮೀರದ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ವಿಜಯಕುಾರ್ ಹೇಳಿದ್ದಾರೆ.

ಇದೇ ವೇಳೆ ಶೋಪಿಯಾನ್‌ನ ಮುನಾಂದ್ ಪ್ರದೇಶದಲ್ಲಿ ಇಂದು ನಡೆದ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ನಾಲ್ವರು ಭಯೋತ್ಪಾದಕರನ್ನು ಸಾಯಿಸಲಾಗಿದೆ. ಭದ್ರತಾ ಪಡೆಗಳು ಕಳೆದ ಎರಡು ವಾರಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಎರಡು ಡಜನ್‌ಗೂ ಅಧಿಕ ಉಗ್ರರನ್ನು ಸಂಹಾರ ಮಾಡಿದ್ದಾರೆ. .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News