ಟ್ರಂಪ್ ಜಾಹೀರಾತುಗಳನ್ನು ತೆಗೆದುಹಾಕಿದ ಫೇಸ್‌ಬುಕ್: ನಾಝಿ ಜರ್ಮನಿಯ ಚಿಹ್ನೆಗೆ ಆಕ್ಷೇಪ

Update: 2020-06-19 17:14 GMT

ಸ್ಯಾನ್‌ಫ್ರಾನ್ಸಿಸ್ಕೊ (ಅಮೆರಿಕ), ಜೂ. 19: ನಾಝಿ ಕಾಲದ ಜರ್ಮನಿಯಲ್ಲಿ ರಾಜಕೀಯ ಕೈದಿಗಳನ್ನು ಸೂಚಿಸಲು ಬಳಸುತ್ತಿದ್ದ ಚಿಹ್ನೆಯನ್ನು ಹೊಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಚುನಾವಣಾ ಪ್ರಚಾರದ ಜಾಹೀರಾತುಗಳನ್ನು ಫೇಸ್‌ಬುಕ್ ಗುರುವಾರ ತೆಗೆದು ಹಾಕಿದೆ.

ಟ್ರಂಪ್‌ರ ಚುನಾವಣಾ ಪ್ರಚಾರ ಜಾಹೀರಾತುಗಳು ಕಂಪೆನಿಯ ‘ಸಂಘಟಿತ ದ್ವೇಷ’ದ ವಿರುದ್ಧದ ನೀತಿಯನ್ನು ಉಲ್ಲಂಘಿಸುತ್ತವೆ, ಹಾಗಾಗಿ ಅವುಗಳನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಹಾಕಲಾಗಿದೆ ಎಂದು ಫೇಸ್‌ಬುಕ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಇತ್ತೀಚಿನ ತಿಂಗಳುಗಳಲ್ಲಿ ಟ್ರಂಪ್‌ರ ರಾಜಕೀಯ ಭಾಷಣಗಳ ವಿಷಯದಲ್ಲಿ ನಿರ್ಲಿಪ್ತ ನಿಲುವು ತೆಗೆದುಕೊಂಡಿರುವುದಕ್ಕಾಗಿ ಫೇಸ್‌ಬುಕ್ ಭಾರೀ ಟೀಕೆಗೆ ಗುರಿಯಾಗಿದೆ.

‘‘ದ್ವೇಷಪೂರಿತ ಸಂಘಟನೆಗಳು ಅಥವಾ ದ್ವೇಷಪೂರಿತ ಸಿದ್ಧಾಂತಗಳನ್ನು ಅವುಗಳ ಹಿನ್ನೆಲೆಯಲ್ಲಿ ಅಥವಾ ಅವುಗಳನ್ನು ಖಂಡಿಸುವ ರೀತಿಯಲ್ಲಿ ಬಳಸದಿದ್ದರೆ ಅವುಗಳನ್ನು ಹಾಕಲು ಅವಕಾಶವಿಲ್ಲ’’ ಎಂದು ಫೇಸ್‌ಬುಕ್‌ನ ಭದ್ರತಾ ನೀತಿಯ ಮುಖ್ಯಸ್ಥ ನತಾನಿಯಲ್ ಗ್ಲೈಚರ್ ಹೌಸ್ ರೆಪ್ರೆಸೆಂಟೇಟಿವ್ಸ್ ಸಮಿತಿಯ ವಿಚಾರಣೆಯ ವೇಳೆ ತಿಳಿಸಿದರು.

‘‘ಈ ಪ್ರಕರಣದಲ್ಲಿ, ಈ ಜಾಹೀರಾತಿನಲ್ಲಿ ಈ ಅಂಶವನ್ನು ನಾವು ಗಮನಿಸಿದ್ದೇವೆ. ಎಲ್ಲಿಯೇ ಆದರೂ ಈ ಚಿಹ್ನೆಯನ್ನು ಬಳಸಿದರೆ ನಾವು ಇದೇ ಕ್ರಮವನ್ನು ತೆಗೆದುಕೊಳ್ಳುತ್ತೇವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News