ಚೀನಾದ ಆಕ್ರಮಣಕ್ಕೆ ಪ್ರಧಾನಿ ಭಾರತದ ಭೂಭಾಗವನ್ನು ಒಪ್ಪಿಸಿದ್ದಾರೆ: ರಾಹುಲ್ ಆರೋಪ

Update: 2020-06-20 07:08 GMT

ಹೊಸದಿಲ್ಲಿ: ಲಡಾಖ್ ‍ನ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾದ ನಂತರದ ಬೆಳವಣಿಗೆಯಲ್ಲಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಸರ್ವಪಕ್ಷಗಳ ಸಭೆ ನಡೆಸಿದರು. ಇದರ ಬೆನ್ನಿಗೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸರಕಾರಕ್ಕೆ ಎರಡು ಪ್ರಶ್ನೆಗಳನ್ನು ಕೇಳಿದ್ದಾರೆ.

“ನಮ್ಮ ಭೂಭಾಗದೊಳಗೆ ಯಾರೂ ನುಗ್ಗಿಲ್ಲ ಹಾಗೂ  ನಮ್ಮ ಯಾವುದೇ ಪೋಸ್ಟ್ ಕೂಡ ಅವರು  ವಶಪಡಿಸಿಕೊಂಡಿಲ್ಲ'' ಎಂದು ಪ್ರಧಾನಿ ಶುಕ್ರವಾರ ಪುನರುಚ್ಛರಿಸಿದ್ದರೆ ಇಂದು ರಾಹುಲ್ “ನಮ್ಮ ಸೈನಿಕರನ್ನೇಕೆ ಕೊಲ್ಲಲಾಯಿತು?'' ಎಂದು ಪ್ರಶ್ನಿಸಿದ್ದಾರೆ.

“ಚೀನಾದ ಆಕ್ರಮಣಕ್ಕೆ ಪ್ರಧಾನಿ ಭಾರತದ ಭೂಭಾಗವನ್ನು ಒಪ್ಪಿಸಿದ್ದಾರೆ. ಆ ಭೂಭಾಗ ಚೀನೀಯರದ್ದಾಗಿದ್ದರೆ 1. ನಮ್ಮ ಸೈನಿಕರ ಹತ್ಯೆಯೇಕೆ ನಡೆಯಿತು?., 2. ಅವರು ಎಲ್ಲಿ ಕೊಲ್ಲಲ್ಪಟ್ಟರು?'' ಎಂದು ರಾಹುಲ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News