×
Ad

‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ಗೆ ಐರೋಪ್ಯ ಸಂಸತ್ತು ಬೆಂಬಲ

Update: 2020-06-20 23:10 IST

ಬ್ರಸೆಲ್ಸ್ (ಬೆಲ್ಜಿಯಮ್), ಜೂ. 20: ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್ (ಕರಿಯರ ಜೀವಗಳಿಗೂ ಮಹತ್ವವಿದೆ)’ ಎನ್ನುವುದನ್ನು ಬೆಂಬಲಿಸುವ ಹಾಗೂ ಜನಾಂಗೀಯ ತಾರತಮ್ಯ ಮತ್ತು ‘ಬಿಳಿಯ ಶ್ರೇಷ್ಠತೆ’ಯನ್ನು ಅದರ ಎಲ್ಲ ರೂಪಗಳಲ್ಲಿ ನಿಗ್ರಹಿಸುವ ಘೋಷಣೆಯ ಪರವಾಗಿ ಯುರೋಪಿಯನ್ ಸಂಸತ್ತು ಶುಕ್ರವಾರ ಮತ ಹಾಕಿದೆ.

ಈ ನಿರ್ಣಯಕ್ಕೆ ಯಾವುದೇ ಕಾನೂನಾತ್ಮಕ ಮಹತ್ವವಿಲ್ಲದಿದ್ದರೂ, ಜನಾಂಗೀಯ ತಾರತಮ್ಯ ವಿರೋಧಿ ಹೋರಾಟಕ್ಕೆ ಅದು ಬೆಂಬಲವನ್ನು ನೀಡುತ್ತದೆ.

ನಿರ್ಣಯವು ಜಾರ್ಜ್ ಫ್ಲಾಯ್ಡಾರ ‘ಆಘಾತಕರ ಸಾವನ್ನು ಬಲವಾಗಿ ಖಂಡಿಸುತ್ತದೆ. ನಿರ್ಣಯದ ಪರವಾಗಿ 493 ಮತ್ತು ವಿರುದ್ಧವಾಗಿ 104 ಮತಗಳು ಬಿದ್ದಿವೆ.

ಅಮೆರಿಕದ ಮಿನಪೊಲಿಸ್ ನಗರದಲ್ಲಿ ಕರಿಯ ವ್ಯಕ್ತಿ ಜಾರ್ಜ್ ಫ್ಲಾಯ್ಡಾ ಬಿಳಿಯ ಪೊಲೀಸರ ಕೈಯಲ್ಲಿ ಅಮಾನುಷವಾಗಿ ಸಾವನ್ನಪ್ಪಿದ ಹಾಗೂ ಬಳಿಕ ನಡೆದ ಬೃಹತ್ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಐರೋಪ್ಯ ಸಂಸತ್ತು ಈ ನಿರ್ಣಯವನ್ನು ಅಂಗೀಕರಿಸಿದೆ.

         

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News