×
Ad

ಚೀನಾದಿಂದ ಹಾಂಕಾಂಗ್ ರಾಷ್ಟ್ರೀಯ ಭದ್ರತಾ ಕಾನೂನು ಅನಾವರಣ

Update: 2020-06-20 23:16 IST

ಬೀಜಿಂಗ್, ಜೂ. 20: ಹಾಂಕಾಂಗ್‌ಗಾಗಿ ರೂಪಿಸಲಾಗಿರುವ ರಾಷ್ಟ್ರೀಯ ಭದ್ರತಾ ಕಾನೂನಿನ ವಿವರಗಳನ್ನು ಚೀನಾ ಶನಿವಾರ ಅನಾವರಣಗೊಳಿಸಿದೆ. ಹಾಂಕಾಂಗ್ 1997ರಲ್ಲಿ ಬ್ರಿಟನ್‌ನಿಂದ ಚೀನಾದ ಆಳ್ವಿಕೆಗೆ ಹಿಂದಿರುಗಿದ ಬಳಿಕ, ಅಲ್ಲಿನ ಜೀವನ ವಿಧಾನದಲ್ಲಿ ಮೊದಲ ಬಾರಿಗೆ ಮಹತ್ವದ ಬದಲಾವಣೆಗಳನ್ನು ಈ ಮೂಲಕ ತರಲಾಗಿದೆ.

ಅಮೆರಿಕ ಮತ್ತು ಯುರೋಪ್‌ನಲ್ಲಿ ಭಾರೀ ಕಳವಳಕ್ಕೆ ಕಾರಣವಾಗಿರುವ ಬಹು ನಿರೀಕ್ಷಿತ ಶಾಸನವು, ಚೀನಾದಲ್ಲಿ ಹಾಂಕಾಂಗ್‌ಗಾಗಿ ರಾಷ್ಟ್ರೀಯ ಭದ್ರತಾ ಕಚೇರಿಯೊಂದನ್ನು ತೆರೆಯಲು ಅನುವು ಮಾಡಿಕೊಡುತ್ತದೆ. ಈ ಕಚೇರಿಯ ಮೂಲಕ ಹಾಂಕಾಂಗ್‌ನ ಗುಪ್ತವರ ವಿವರಗಳನ್ನು ಪಡೆಯಲಾಗುತ್ತದೆ ಹಾಗೂ ರಾಷ್ಟ್ರೀಯ ಭದ್ರತೆಗೆ ವಿರುದ್ಧವೆಂದು ಪರಿಗಣಿಸಲಾದ ಅಪರಾಧಗಳನ್ನು ನಿಭಾಯಿಸಲಾಗುತ್ತದೆ ಎಂದು ಚೀನಾದ ಅಧಿಕೃತ ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ ನಿರ್ದಿಷ್ಟ ನ್ಯಾಯಾಧೀಶರನ್ನು ನೇಮಿಸಲು ನೂತನ ಕಾನೂನು ಹಾಂಕಾಂಗ್ ನಾಯಕಿ ಕ್ಯಾರೀ ಲ್ಯಾಮ್‌ಗೆ ಅಧಿಕಾರ ನೀಡುತ್ತದೆ.

ರಾಷ್ಟ್ರೀಯ ಭದ್ರತಾ ಕಾನೂನು ಮಾನವಹಕ್ಕುಗಳು, ವಾಕ್‌ಸ್ವಾತಂತ್ರ್ಯ ಮತ್ತು ಸಭೆ ಸೇರುವ ಹಕ್ಕನ್ನು ರಕ್ಷಿಸುತ್ತದೆ ಎಂದು ಸುದ್ದಿ ಸಂಸ್ಥೆ ಹೇಳಿದೆಯಾದರೂ, ವಿವರಗಳನ್ನು ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News