ಲಾಕ್‍ ಡೌನ್ ಪರಿಣಾಮ: ಉದ್ಯೋಗವಿಲ್ಲದೆ ತಳ್ಳುಗಾಡಿಯಲ್ಲಿ ಇಡ್ಲಿ, ವಡೆ ಮಾರುತ್ತಿರುವ ಶಾಲೆಯ ಪ್ರಾಂಶುಪಾಲ!

Update: 2020-06-21 08:21 GMT
Photo: indianexpress.com

ಹೈದರಾಬಾದ್: ಲಾಕ್ ಡೌನ್ ನಿಂದ ಉದ್ಯೋಗವಿಲ್ಲದೆ ಕಂಗಾಲಾಗಿರುವ ಇಲ್ಲಿನ ಖಾಸಗಿ ಶಾಲೆಯ ಪ್ರಾಚಾರ್ಯರೊಬ್ಬರು ತಳ್ಳುಗಾಡಿಯಲ್ಲಿ ಇಡ್ಲಿ, ವಡೆ ಮಾರುತ್ತಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ಹಾಗೂ ಲಾಕ್‍ಡೌನ್ ಕಾರಣದಿಂದ ಸೃಷ್ಟಿಯಾಗಿರುವ ತೀವ್ರ ಆರ್ಥಿಕ ಸಂಕಷ್ಟ, ಅಸಂಖ್ಯಾತ ಮಂದಿಯ ಉದ್ಯೋಗವನ್ನು ಕಿತ್ತುಕೊಂಡಿದೆ. ದೊಡ್ಡ ಪ್ರಮಾಣದಲ್ಲಿ ನಗರಗಳಿಂದ ಜನ ಹಳ್ಳಿಗಳತ್ತ ವಲಸೆ ಬರಲು ಕೂಡಾ ಇದು ಕಾರಣವಾಗಿದ್ದು, ಲಕ್ಷಾಂತರ ಸಣ್ಣ ವ್ಯಾಪಾರಿಗಳ ಜೀವನಾಧಾರವನ್ನೇ ಕಿತ್ತುಕೊಂಡಿದೆ.

ರಾಂಚಿಯ ಸಮಾಜ ವಿಜ್ಞಾನ ಶಿಕ್ಷಕರೊಬ್ಬರು ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದರೆ, ನಲ್ಗೊಂಡದ ಇಂಗ್ಲಿಷ್ ಶಿಕ್ಷಕರೊಬ್ಬರು ವಿಮಾ ಪಾಲಿಸಿ ಮಾರಾಟಕ್ಕೆ ಇಳಿದಿದ್ದಾರೆ. ಖಾಸಗಿ ಶಿಕ್ಷಣ ವಲಯದ ಮೇಲೆ ಲಾಕ್‍ ಡೌನ್ ಕರಾಳ ಪರಿಣಾಮ ಬೀರಿದೆ. ದೇಶಾದ್ಯಂತ ನಗರ ಹಾಗೂ ಸಣ್ಣ ಪಟ್ಟಣಗಳಲ್ಲಿ ಪೋಷಕರು ಶಾಲಾ ಶುಲ್ಕವನ್ನು ಭರಿಸಲಾಗದೇ ಶಿಕ್ಷಕರಿಗೆ ವೇತನ ನೀಡಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

ಬಹುತೇಕ ಕಡೆಗಳಲ್ಲಿ ಶಿಕ್ಷಕರು ತಮ್ಮ ಕುಟುಂಬದ ಜೀವನಾಧಾರವಾಗಿದ್ದು, ಇಡೀ ಕುಟುಂಬಕ್ಕೆ ಲಾಕ್‍ ಡೌನ್ ಬಿಸಿ ತಟ್ಟಿದೆ. ಬಹುತೇಕ ಮಂದಿ ನಗರ, ಪಟ್ಟಣಗಳನ್ನು ತೊರೆದು ಹಳ್ಳಿಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.

“ಜುಲೈ- ಆಗಸ್ಟ್ ವೇಳೆಗೆ ಶಾಲೆಗಳು ಪುನರಾರಂಭವಾಗದಿದ್ದರೆ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ” ಎಂಬ ಆತಂಕವನ್ನು 28 ವರ್ಷದ ವಿಜ್ಞಾನಶಿ ಕ್ಷಕರೊಬ್ಬರು ವ್ಯಕ್ತಪಡಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News