90 ಶೇ. ಕೊರೋನ ಸೋಂಕು ವಿದೇಶದಿಂದ ಹಿಂದಿರುಗಿದವರಲ್ಲಿ: ನೇಪಾಳ

Update: 2020-06-22 16:07 GMT

ಕಠ್ಮಂಡು (ನೇಪಾಳ), ಜೂ. 22: ದೇಶದಲ್ಲಿ ವರದಿಯಾಗಿರುವ ಕೊರೋನ ವೈರಸ್ ಸೋಂಕು ಪ್ರಕರಣಗಳ ಪೈಕಿ 90 ಶೇಕಡ ವಿದೇಶಗಳಿಂದ, ಅದರಲ್ಲೂ ಮುಖ್ಯವಾಗಿ ಭಾರತದಿಂದ ಹಿಂದಿರುಗಿದ ವಲಸೆ ಕಾರ್ಮಿಕರಿಂದ ಬಂದಿವೆ ಎಂದು ನೇಪಾಳ ರವಿವಾರ ಹೇಳಿದೆ.

ನೇಪಾಳದಲ್ಲಿ 24 ಗಂಟೆಗಳ ಅವಧಿಯಲ್ಲಿ 421 ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸಂಖ್ಯೆ 9,026ಕ್ಕೆ ಏರಿದೆ.

ಸಾಂಕ್ರಾಮಿಕವು ಈಗ ದೇಶದ ಒಟ್ಟು 77 ಜಿಲ್ಲೆಗಳ ಪೈಕಿ 75 ಜಿಲ್ಲೆಗಳಲ್ಲಿ ಹಬ್ಬಿದೆ ಎಂದು ದೇಶದ ಆರೋಗ್ಯ ಸಚಿವಾಲಯ ತಿಳಿಸಿದೆ.

ನೇಪಾಳದ 90 ಶೇಕಡ ಕೊರೋನ ವೈರಸ್ ಪ್ರಕರಣಗಳು ವಿದೇಶಗಳಿಂದ, ಅದರಲ್ಲೂ ಮುಖ್ಯವಾಗಿ ಭಾರತದಿಂದ ಹಿಂದಿರುಗಿದ ಕಾರ್ಮಿಕರಲ್ಲಿ ಪತ್ತೆಯಾಗಿವೆ ಹಾಗೂ ಸೋಂಕಿಗೆ ಒಳಗಾಗಿರುವ 98 ಶೇಕಡ ಜನರು ಯಾವುದೇ ಲಕ್ಷಣಗಳನ್ನು ತೋರಿಸಿಲ್ಲ ಎಂದು ಆರೋಗ್ಯ ಸಚಿವಾಲಯದ ಸಾಂಕ್ರಾಮಿಕ ರೋಗಗಳ ವಿಭಾಗದ ನಿರ್ದೇಶಕರಾಗಿರುವ ಡಾ. ಬಸುದೇವ್ ಪಾಂಡೆ ದೈನಂದಿನ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಾರಕ ಸಾಂಕ್ರಾಮಿಕದಿಂದಾಗಿ ಈವರೆಗೆ ಸಾವಿಗೀಡಾದವರ ಸಂಖ್ಯೆ ರವಿವಾರ 23ಕ್ಕೆ ಏರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News