ಕೋವಿಡ್-19 ಸಮಯದಲ್ಲಿ ವಿದ್ಯಾರ್ಥಿಗಳಿಗೆ ನೆರವು ನೀಡಲು ದೇಶಗಳು ವಿಫಲ: ವರದಿ

Update: 2020-06-23 17:42 GMT
ಸಾಂದರ್ಭಿಕ ಚಿತ್ರ

ಯುನೆಸ್ಕೊಜಿನೀವ (ಸ್ವಿಟ್ಸರ್‌ಲ್ಯಾಂಡ್), ಜೂ. 23: ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಶಾಲೆಗಳನ್ನು ಮುಚ್ಚಿದ್ದಾಗ ಅಪಾಯದಲ್ಲಿದ್ದ ವಿದ್ಯಾರ್ಥಿಗಳಿಗೆ ನೆರವು ನೀಡಲು ಕನಿಷ್ಠ 40 ಶೇಕಡದಷ್ಟು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳು ವಿಫಲವಾಗಿವೆ ಎಂದು ಯುನೆಸ್ಕೊದ 2020 ಜಾಗತಿಕ ಶಿಕ್ಷಣ ನಿಗಾ (ಜಿಇಎಂ) ವರದಿ ತಿಳಿಸಿದೆ.

ಅದೇ ವೇಳೆ, ಶಿಕ್ಷಣದಲ್ಲಿ ಸರ್ವರನ್ನೂ ಒಳಗೊಳಿಸುವುದನ್ನು ಖಾತರಿಪಡಿಸುವ ಕಾನೂನುಗಳನ್ನು ಜಗತ್ತಿನ 10 ಶೇಕಡಕ್ಕಿಂತಲೂ ಕಡಿಮೆ ದೇಶಗಳು ಹೊಂದಿವೆ ಎಂದು ಮಂಗಳವಾರ ಬಿಡುಗಡೆಗೊಂಡ ವಾರ್ಷಿಕ ವರದಿಯ ನಾಲ್ಕನೇ ಆವೃತ್ತಿ ತಿಳಿಸಿದೆ.

‘‘ನಮ್ಮ ಶಿಕ್ಷಣ ವ್ಯವಸ್ಥೆಗಳ ಬಗ್ಗೆ ಹೊಸದಾಗಿ ಯೋಚಿಸಲು ಕೋವಿಡ್-19 ನಮಗೆ ನಿಜವಾದ ಅವಕಾಶವನ್ನು ಒದಗಿಸಿದೆ. ಆದರೆ, ವೈವಿಧ್ಯತೆಯನ್ನು ಗೌರವಿಸುವ ಹಾಗೂ ಸ್ವಾಗತಿಸುವ ಜಗತ್ತಿನೆಡೆಗೆ ಸಾಗುವುದು ರಾತ್ರೋರಾತ್ರಿ ಸಂಭವಿಸುವುದಿಲ್ಲ. ಒಂದೇ ಸೂರಿನಡಿಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಕಲಿಸುವುದು ಹಾಗೂ ವಿದ್ಯಾರ್ಥಿಗಳು ಅತ್ಯುತ್ತಮವಾಗಿ ಕಲಿಯುವಂಥ ವಾತಾವರಣವೊಂದನ್ನು ಸೃಷ್ಟಿಸುವುದು- ಇವೆರಡು ಒಟ್ಟಿಗೆ ಸಂಭವಿಸುವುದಿಲ್ಲ. ಆದರೆ, ನಾವು ಪ್ರಯತ್ನಗಳನ್ನು ಮಾಡಿದರೆ ಇದಕ್ಕಿಂತ ಚೆನ್ನಾಗಿ ನಿರ್ವಹಿಸಲು ಅವಕಾಶವಿದೆ ಎನ್ನುವುದನ್ನು ಕೋವಿಡ್-19 ನಮಗೆ ತೋರಿಸಿಕೊಟ್ಟಿದೆ’’ ಎಂದು ಗ್ಲೋಬಲ್ ಎಜುಕೇಶನ್ ಮೋನಿಟರಿಂಗ್ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News