2021ರ ತನಕ ಡೇವಿಸ್ ಕಪ್ ಫೈನಲ್ಸ್ ಮುಂದೂಡಿಕೆ

Update: 2020-06-27 17:53 GMT

ಲಂಡನ್, ಜೂ.27: ಕೊರೋನ ವೈರಸ್ ಸಾಂಕ್ರಾಮಿಕ ಕಾಯಿಲೆ ಹಿನ್ನೆಲೆಯಲ್ಲಿ ಈ ವರ್ಷ ನಿಗದಿಯಾಗಿದ್ದ ಡೇವಿಸ್ ಕಪ್ ಪುರುಷರ ಟೆನಿಸ್ ಸ್ಪರ್ಧೆಯನ್ನು 2021ಕ್ಕೆ ಮುಂದೂಡಲಾಗಿದೆ.

ಪಂದ್ಯಗಳು ಸೆಪ್ಟಂಬರ್‌ನಲ್ಲಿ ನಡೆಯಬೇಕಾಗಿತ್ತು. ಡೇವಿಸ್ ಕಪ್ ಫೈನಲ್ಸ್ ನವೆಂಬರ್‌ನಲ್ಲಿ ಮ್ಯಾಡ್ರಿಡ್‌ನಲ್ಲಿ ನಿಗದಿಯಾಗಿತ್ತು. ವರ್ಲ್ಡ್ ಗ್ರೂಪ್-1 ಹಾಗೂ ವರ್ಲ್ಡ್ ಗ್ರೂಪ್-2ರ ಪ್ರಾಥಮಿಕ ಪಂದ್ಯಗಳು 2021ರ ಮಾರ್ಚ್ ಇಲ್ಲವೇ ಸೆಪ್ಟಂಬರ್‌ನಲ್ಲಿ ವಿವಿಧ ತಾಣಗಳಲ್ಲಿ ನಡೆಯಲಿದೆ. 2021ರ ನವೆಂಬರ್ 22 ರಂದು ಮ್ಯಾಡ್ರಿಡ್‌ನಲ್ಲಿ ಫೈನಲ್ ಪಂದ್ಯ ನಿಗದಿಯಾಗಿದೆ.

 2021ಕ್ಕೆ ಮುಂದೂಡಿಕೆಯಾಗಿರುವ ಫೈನಲ್ಸ್‌ಗೆ ಈಗಾಗಲೇ 18 ರಾಷ್ಟ್ರಗಳು ಅರ್ಹತೆ ಪಡೆದಿವೆ ಎಂದು ಅಂತರ್‌ರಾಷ್ಟ್ರೀಯ ಟೆನಿಸ್ ಒಕ್ಕೂಟ(ಐಟಿಎಫ್) ತಿಳಿಸಿದೆ. ಈ ವರ್ಷ ನಡೆಯಬೇಕಾಗಿದ್ದ ಮಹಿಳಾ ಫೆಡ್ ಕಪ್ ಫೈನಲ್ಸ್‌ನ್ನು ರದ್ದುಪಡಿಸಿರುವ ಐಟಿಎಫ್ ಈ ಟೂರ್ನಿಯು ಹಂಗೇರಿಯದ ಬುಡಾಪೆಸ್ಟ್‌ನಲ್ಲಿ ಎಪ್ರಿಲ್ 13ರಿಂದ 18ರ ತನಕ ನಡೆಯಲಿದೆ ಎಂದು ತಿಳಿಸಿದೆ.

ಫೆಡ್ ಕಪ್ ಈ ವರ್ಷದ ಎಪ್ರಿಲ್‌ನಲ್ಲಿ ನಡೆಯಬೇಕಾಗಿತ್ತು. ಆದರೆ, ಇದನ್ನು ಕೋವಿಡ್-19 ಕಾರಣಕ್ಕೆ ಮುಂದೂಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News