ಜೆರುಸಲೇಮ್‌ನಲ್ಲಿ ನೆತನ್ಯಾಹು ವಿರುದ್ಧ ಪ್ರತಿಭಟನೆ

Update: 2020-06-28 17:03 GMT

ಟೆಲ್ ಅವೀವ್ (ಇಸ್ರೇಲ್), ಜೂ. 28: ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುರ ಜೆರುಸಲೇಮ್‌ನಲ್ಲಿರುವ ನಿವಾಸದ ಹೊರಗೆ ಸಂಜೆ ನೂರಾರು ಮಂದಿ ಪ್ರತಿಭಟನೆ ನಡೆಸಿದ್ದಾರೆ.

ಭ್ರಷ್ಟಾಚಾರ ಆರೋಪದಲ್ಲಿ ದೋಷಾರೋಪಣೆಗೆ ಒಳಗಾದ ಹೊರತಾಗಿಯೂ ನೆತನ್ಯಾಹು ಪ್ರಧಾನಿಯಾಗಿ ಮುಂದುವರಿಯುವುದನ್ನು ವಿರೋಧಿಸಿ ಶುಕ್ರವಾರ ಸಣ್ಣ ಗುಂಪೊಂದು ಪ್ರತಿಭಟನೆ ನಡೆಸಿತ್ತು. ಆ ಸಂದರ್ಭದಲ್ಲಿ ಏಳು ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿರುವುದನ್ನು ಪ್ರತಿಭಟಿಸಿ ದೊಡ್ಡ ಸಂಖ್ಯೆಯಲ್ಲಿ ಜನರು ಶನಿವಾರ ಪ್ರತಿಭಟನೆ ನಡೆಸಿದ್ದಾರೆ.

ನೆತನ್ಯಾಹುರನ್ನು ‘ಕ್ರೈಮ್ ಮಿನಿಸ್ಟರ್’ ಎಂಬುದಾಗಿ ಬಣ್ಣಿಸುವ ಫಲಕಗಳನ್ನು ಪ್ರತಿಭಟನಕಾರರು ಹಿಡಿದಿದ್ದರು.

ಒಂದು ವರ್ಷಕ್ಕೂ ಅಧಿಕ ಅವಧಿಯ ರಾಜಕೀಯ ಬಿಕ್ಕಟ್ಟಿನ ಬಳಿಕ, ನೆತನ್ಯಾಹು ನೇತೃತ್ವದ ನೂತನ ಸರಕಾರ ಕಳೆದ ತಿಂಗಳು ಅಧಿಕಾರಕ್ಕೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News