ರೆಮ್‌ಡೆಸಿವಿರ್‌ಗೆ ಬೆಲೆ ನಿಗದಿ: ಪ್ರತಿ ರೋಗಿಗೆ 1.76 ಲಕ್ಷ ರೂ.

Update: 2020-06-30 16:32 GMT

ವಾಶಿಂಗ್ಟನ್, ಜೂ. 30: ತನ್ನ ಕೋವಿಡ್-19 ಔಷಧ ‘ರೆಮ್‌ಡೆಸಿವಿರ್’ನ ಬೆಲೆಯನ್ನು ಶ್ರೀಮಂತ ರಾಷ್ಟ್ರಗಳಲ್ಲಿ ಪ್ರತಿ ರೋಗಿಗೆ 2,340 ಡಾಲರ್ (ಸುಮಾರು 1,76,700 ರೂಪಾಯಿ)ಗೆ ಗಿಲಿಯಡ್ ಸಯನ್ಸಸ್ ಇಂಕ್ ಸೋಮವಾರ ನಿಗದಿಪಡಿಸಿದೆ ಹಾಗೂ ಮುಂದಿನ ಮೂರು ತಿಂಗಳಲ್ಲಿ ತನ್ನ ಬಹುತೇಕ ಎಲ್ಲ ಉತ್ಪನ್ನಗಳನ್ನು ಅಮೆರಿಕಕ್ಕೆ ಕಳುಹಿಸಲು ಒಪ್ಪಿಕೊಂಡಿದೆ.

ಕೋವಿಡ್-19ರ ಪ್ರಗತಿಯನ್ನು ಬದಲಾಯಿಸಬಲ್ಲ ಏಕೈಕ ಔಷಧ ರೆಮ್‌ಡೆಸಿವಿರ್ ಎನ್ನುವುದು ಸಾಬೀತಾಗಿರುವುದರಿಂದ ಅದಕ್ಕೆ ತುಂಬಾ ಬೇಡಿಕೆ ಬರುವ ನಿರೀಕ್ಷೆಯಿದೆ. ಕ್ಲಿನಿಕಲ್ ಪರೀಕ್ಷೆಗಳಲ್ಲಿ, ರಕ್ತದ ಮೂಲಕ ನೀಡಲಾಗುವ ಈ ಔಷಧವು ಆಸ್ಪತ್ರೆಗಳಲ್ಲಿ ರೋಗಿಗಳ ಚೇತರಿಕೆ ಅವಧಿಯನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಿದ ಬಳಿಕ, ಅಮೆರಿಕದಲ್ಲಿ ಈ ಔಷಧದ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ. ಅದೇ ವೇಳೆ, ಜಪಾನ್‌ನಲ್ಲಿ ರೆಮ್‌ಡೆಸಿವಿರ್‌ಗೆ ಪೂರ್ಣ ಪ್ರಮಾಣದ ಅನುಮೋದನೆಯನ್ನು ನೀಡಲಾಗಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಅಗತ್ಯವಿರುವಷ್ಟು ತೀವ್ರ ತರದ ರೋಗ ಲಕ್ಷಣಗಳನ್ನು ಹೊಂದಿದ ರೋಗಿಗಳಿಗೆ ಐದು ದಿನದ ಚಿಕಿತ್ಸೆಯಾಗಿ ರೆಮ್‌ಡೆಸಿವಿರ್‌ನ್ನು ನೀಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News