ಚೀನಾ ಮೇಲಿನ ಕೋಪ ಪ್ರತಿ ಕ್ಷಣ ಹೆಚ್ಚುತ್ತಿದೆ: ಟ್ರಂಪ್

Update: 2020-07-01 16:23 GMT

ವಾಶಿಂಗ್ಟನ್, ಜು. 1: ಕೊರೋನ ವೈರಸ್ ಸಾಂಕ್ರಾಮಿಕದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಲು ತಮಗೆ ಇನ್ನೂ ಸಾಧ್ಯವಾಗಿಲ್ಲ ಎಂಬುದಾಗಿ ಅಮೆರಿಕದ ಆರೋಗ್ಯ ಅಧಿಕಾರಿಗಳು ಹೇಳಿರುವಂತೆಯೇ, ಸಾಂಕ್ರಾಮಿಕದ ಹರಡುವಿಕೆಗೆ ಕಾರಣವಾದ ಚೀನಾದ ಮೇಲಿನ ಕೋಪ ಪ್ರತಿ ಕ್ಷಣ ಹೆಚ್ಚುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದಾರೆ.

‘‘ಕೊರೋನ ವೈರಸ್ ಸಾಂಕ್ರಾಮಿಕವು ಜಗತ್ತಿನಾದ್ಯಂತ ವೇಗವಾಗಿ ಪಸರಿಸುತ್ತಿದೆ ಹಾಗೂ ಅಮೆರಿಕದಲ್ಲಿ ಅದು ಅಪಾರ ಪ್ರಮಾಣದ ಹಾನಿಯನ್ನು ಉಂಟು ಮಾಡಿದೆ. ಇದನ್ನೆಲ್ಲ ನೋಡುವಾಗ ಚೀನಾದ ಮೇಲಿನ ನನ್ನ ಕೋಪ ಪ್ರತಿಕ್ಷಣ ಏರುತ್ತಿದೆ’’ ಎಂಬುದಾಗಿ ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಸಾಂಕ್ರಾಮಿಕದ ಜಾಗತಿಕ ಹರಡುವಿಕೆಗೆ ಚೀನಾ ಕಾರಣ ಎಂಬುದಾಗಿ ಟ್ರಂಪ್ ಪದೇ ಪದೇ ಆರೋಪಿಸುತ್ತಿದ್ದಾರೆ. ವ್ಯಾಪಾರ ಸಮರದ ಹಿನ್ನೆಲೆಯಲ್ಲಿ ಎರಡು ದೇಶಗಳ ನಡುವೆ ಅದಾಗಲೇ ತಲೆದೋರಿದ್ದ ಉದ್ವಿಗ್ನತೆಯು ಈಗ ಕೊರೋನ ಸಾಂಕ್ರಾಮಿಕದ ಬಳಿಕ ತಾರಕಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News