ಸಿಬ್ಬಂದಿ ವಿವರ, ಹಣಕಾಸು ಮಾಹಿತಿ ಒದಗಿಸಿ: ಅಮೆರಿಕದ ಸುದ್ದಿ ಸಂಸ್ಥೆಗಳಿಗೆ ಚೀನಾ ಆದೇಶ

Update: 2020-07-01 16:29 GMT

ಬೀಜಿಂಗ್, ಜು. 1: ಸಿಬ್ಬಂದಿ ವಿವರ ಮತ್ತು ಚೀನಾದಲ್ಲಿನ ಹಣಕಾಸು ವ್ಯವಹಾರಗಳ ಕುರಿತ ಮಾಹಿತಿಯನ್ನು ಏಳು ದಿನಗಳಲ್ಲಿ ನೀಡುವಂತೆ ಅಮೆರಿಕದ ನಾಲ್ಕು ಸುದ್ದಿ ಸಂಸ್ಥೆಗಳಿಗೆ ಚೀನಾ ಬುಧವಾರ ಆದೇಶ ನೀಡಿದೆ.

ಚೀನಾ ಕೇಳಿರುವ ಮಾಹಿತಿಯನ್ನು ಅಸೋಸಿಯೇಟಡ್ ಪ್ರೆಸ್, ಯುನೈಟೆಡ್ ಪ್ರೆಸ್ ಇಂಟರ್‌ನ್ಯಾಶನಲ್, ಸಿಬಿಎಸ್ ಮತ್ತು ಎನ್‌ಪಿಆರ್ ನೀಡಬೇಕಾಗಿದೆ. ಜೊತೆಗೆ, ಚೀನಾದಲ್ಲಿ ಈ ಸಂಸ್ಥೆಗಳು ಯಾವುದೇ ಜಮೀನನ್ನು ಹೊಂದಿವೆಯೇ ಎನ್ನುವ ಮಾಹಿತಿಯನ್ನೂ ನೀಡಬೇಕಾಗಿದೆ ಎಂದು ಚೀನಾದ ವಿದೇಶ ಸಚಿವಾಲಯದ ವಕ್ತಾರ ಝಾವೊ ಲಿಜಿಯನ್ ಹೇಳಿದರು.

ಕಳೆದ ತಿಂಗಳು ಚೀನಾದ ನಾಲ್ಕು ಸರಕಾರಿ ಮಾಧ್ಯಮ ಕಚೇರಿಗಳ ಮೇಲೆ ಅಮೆರಿಕ ಹೇರಿರುವ ನಿರ್ಬಂಧಗಳಿಗೆ ಪ್ರತೀಕಾರವಾಗಿ ಚೀನಾ ಈ ಕ್ರಮ ತೆಗೆದುಕೊಂಡಿದೆ.

‘‘ಅಮೆರಿಕದಲ್ಲಿರುವ ಚೀನೀ ಮಾಧ್ಯಮ ಸಂಸ್ಥೆಗಳ ಮೇಲೆ ವಿನಾಕಾರಣ ಅಮೆರಿಕ ನಡೆಸಿರುವ ದಬ್ಬಾಳಿಕೆಯ ವಿರುದ್ಧ ಚೀನಾ ಪ್ರತೀಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿತ್ತು’’ ಎಂದು ಪತ್ರಿಕಾಗೋಷ್ಠಿಯಲ್ಲಿ ಝಾವೊ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News