ನೇಪಾಳ: ಪ್ರಧಾನಿ ಒಲಿ ರಾಜೀನಾಮೆಗೆ ಆಡಳಿತಾರೂಢ ಪಕ್ಷದಿಂದ ಒತ್ತಾಯ

Update: 2020-07-01 16:46 GMT

ಕಠ್ಮಂಡು (ನೇಪಾಳ), ಜು. 1: ನೇಪಾಳ ಪ್ರಧಾನಿ ಕೆ.ಪಿ. ಶರ್ಮ ಒಲಿ ರಾಜೀನಾಮೆ ನೀಡಬೇಕೆಂದು ದೇಶದ ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕರು ಮಂಗಳವಾರ ಒತ್ತಾಯಿಸಿದ್ದಾರೆ. “ನೇಪಾಳದ ರಾಜಕೀಯ ನಕಾಶೆಯನ್ನು ನನ್ನ ಸರಕಾರ ನವೀಕರಿಸಿದ ಬಳಿಕ ನನ್ನನ್ನು ಪದಚ್ಯುತಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ” ಎಂಬುದಾಗಿ ಪ್ರಧಾನಿ ಇತ್ತೀಚೆಗೆ ನೀಡಿದ ಹೇಳಿಕೆಯ ಬಳಿಕ ಈ ಬೆಳವಣಿಗೆ ಸಂಭವಿಸಿದೆ.

ಪ್ರಧಾನಿಯ ಅಧಿಕೃತ ನಿವಾಸ ‘ಬಲುವಟಾರ್’ ನಲ್ಲಿ ಮಂಗಳವಾರ ನಡೆದ ಆಡಳಿತಾರೂಢ ಪಕ್ಷದ ಪ್ರಭಾವಿ ಸ್ಥಾಯಿ ಸಮಿತಿಯ ಸಭೆ ಆರಂಭಗೊಂಡ ಕೂಡಲೇ, ರವಿವಾರ ನೀಡಿದ ಹೇಳಿಕೆಗಾಗಿ ಪ್ರಧಾನಿ ಒಲಿಯನ್ನು ಮಾಜಿ ಪ್ರಧಾನಿ ಪುಷ್ಪ ಕಮಲ್ ದಹಲ್ ‘ಪ್ರಚಂಡ’ ತರಾಟೆಗೆ ತೆಗೆದುಕೊಂಡರು.

‘‘ತನ್ನನ್ನು ಕೆಳಗಿಳಿಸಲು ಭಾರತ ಪಿತೂರಿ ನಡೆಸುತ್ತಿದೆ ಎಂಬುದಾಗಿ ಪ್ರಧಾನಿ ನೀಡಿರುವ ಹೇಳಿಕೆಯು ರಾಜಕೀಯವಾಗಿಯೂ ಸರಿಯಲ್ಲ, ರಾಜತಾಂತ್ರಿಕವಾಗಿಯೂ ಸೂಕ್ತವಲ್ಲ’’ ಎಂದು ಪ್ರಚಂಡ ಹೇಳಿದರು.

‘‘ಪ್ರಧಾನಿ ನೀಡುವ ಇಂಥ ಹೇಳಿಕೆಗಳು ನೆರೆಯ ದೇಶದೊಂದಿಗಿನ ನಮ್ಮ ಸಂಬಂಧವನ್ನು ಹಾಳುಮಾಡಬಹುದು’’ ಎಂದು ಅವರು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News