ಮೇರಿ ಟ್ರಂಪ್ ಪುಸ್ತಕದ ಮೇಲಿನ ತಡೆಯಾಜ್ಞೆ ತೆರವು

Update: 2020-07-02 17:26 GMT

ವಾಶಿಂಗ್ಟನ್, ಜು. 2: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಅಣ್ಣನ ಮಗಳು ಮೇರಿ ಟ್ರಂಪ್ ಬರೆದಿರುವ ಹಾಗೂ ಡೊನಾಲ್ಡ್ ಟ್ರಂಪ್ ಬಗ್ಗೆ ಸ್ಫೋಟಕ ಮಾಹಿತಿಗಳನ್ನು ಒಳಗೊಂಡಿದೆ ಎನ್ನಲಾದ ಪುಸ್ತಕದ ಬಿಡುಗಡೆಯ ಮೇಲೆ ನ್ಯೂಯಾರ್ಕ್‌ನ ನ್ಯಾಯಾಧೀಶರೊಬ್ಬರು ನೀಡಿರುವ ತಾತ್ಕಾಲಿಕ ತಡೆಯಾಜ್ಞೆಯನ್ನು ನ್ಯೂಯಾರ್ಕ್‌ನ ಮೇಲ್ಮನವಿ ನ್ಯಾಯಾಲಯವೊಂದು ಬುಧವಾರ ತೆರವುಗೊಳಿಸಿದೆ.

‘ಟೂ ಮಚ್ ಆ್ಯಂಡ್ ನೆವರ್ ಇನಫ್: ಹೌ ಮೈ ಫ್ಯಾಮಿಲಿ ಕ್ರಿಯೇಟಡ್ ದ ವರ್ಲ್ಡ್ಸ್ ಮೋಸ್ಟ್ ಡೇಂಜರಸ್ ಮ್ಯಾನ್’ ಎಂಬ ಹೆಸರಿನ ಪುಸ್ತಕವು ಟ್ರಂಪ್‌ರನ್ನು ‘ಜಗತ್ತಿನ ಅತ್ಯಂತ ಅಪಾಯಕಾರಿ ಮನುಷ್ಯ’ ಎಂಬುದಾಗಿ ಬಣ್ಣಿಸುತ್ತದೆ ಎನ್ನಲಾಗಿದೆ.

ಪುಸ್ತಕವನ್ನು ಮುದ್ರಿಸಲು ಹಾಗೂ ವಿತರಿಸಲು ಪ್ರಕಾಶಕರಾದ ಸೈಮನ್ ಆ್ಯಂಡ್ ಶಸ್ಟರ್‌ಗೆ ನ್ಯಾಯಾಧೀಶ ಅಲನ್ ಶೀಂಕ್‌ಮನ್ ಅನುಮತಿ ನೀಡಿದ್ದಾರೆ.

ಇದಕ್ಕೂ ಮೊದಲು ನ್ಯೂಯಾರ್ಕ್‌ನ ನ್ಯಾಯಾಲಯವೊಂದು ಪುಸ್ತಕದ ಬಿಡುಗಡೆಗೆ ಜುಲೈ 10ರವರೆಗೆ ತಡೆಯಾಜ್ಞೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News