ಬ್ರಿಟನ್: ವಾಣಿಜ್ಯ ಕೇಂದ್ರಕ್ಕೆ ಬೆಂಕಿ; ಭಾರತೀಯನಿಗೆ 34 ತಿಂಗಳು ಜೈಲು

Update: 2020-07-03 16:50 GMT

ಲಂಡನ್, ಜು. 3: 2019 ಜನವರಿಯಲ್ಲಿ ಬ್ರಿಟನ್ ನ ಲೀಸೆಸ್ಟರ್ ನಗರದಲ್ಲಿನ ವಾಣಿಜ್ಯ ಕೇಂದ್ರವೊಂದಕ್ಕೆ ಬೆಂಕಿ ಕೊಟ್ಟಿರುವ ಆರೋಪವನ್ನು ಎದುರಿಸುತ್ತಿರುವ ಭಾರತ ಮೂಲದ ವ್ಯಕ್ತಿಯೊಬ್ಬನಿಗೆ 34 ತಿಂಗಳ ಸೆರೆವಾಸ ವಿಧಿಸಲಾಗಿದೆ ಎಂದು ಲೀಸೆಸ್ಟರ್‌ಶೈರ್ ಪೊಲೀಸರು ಗುರುವಾರ ತಿಳಿಸಿದ್ದಾರೆ.

ನಾಟಿಂಗ್‌ಹ್ಯಾಮ್‌ನಲ್ಲಿ ನೆಲೆಸಿರುವ 28 ವರ್ಷದ ಪರ್ವಿಂದರ್ ಸಿಂಗ್ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಅವರು ಹೇಳಿದರು.

ಭಾರತ ಮತ್ತು ಏಶ್ಯನ್ ವ್ಯಾಪಾರ ಕೇಂದ್ರವಾಗಿರುವ ಬೆಲ್‌ಗ್ರೇವ್ ಕಮರ್ಶಿಯಲ್ ಸೆಂಟರ್‌ಗೆ ಬೆಂಕಿ ಕೊಟ್ಟಿರುವುದನ್ನು ಆರೋಪಿಯು ಒಪ್ಪಿಕೊಂಡಿದ್ದಾನೆ. ಹಲವಾರು ಅಂಗಡಿಗಳು ಸುಟ್ಟುಹೋಗಿದ್ದವು. ಬೆಂಕಿ ಕೊಟ್ಟಿರುವುದಕ್ಕೆ ಕಾರಣವನ್ನು ಬಹಿರಂಗಪಡಿಸಲಾಗಿಲ್ಲ. ಆತನ ಕೃತ್ಯವು ಸಿಸಿಟಿವಿ ಕ್ಯಾಮರಗಳಲ್ಲಿ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News