160 ದಾಟಿದ ಮೃತರ ಸಂಖ್ಯೆ

Update: 2020-07-03 17:21 GMT

ಯಾಂಗನ್ (ಮ್ಯಾನ್ಮಾರ್), ಜು. 3: ಉತ್ತರ ಮ್ಯಾನ್ಮಾರ್‌ನಲ್ಲಿನ ಹರಳು (ಅಮೂಲ್ಯ ಕಲ್ಲು) ಗಣಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 160ನ್ನು ದಾಟಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಶೋಧ ಕಾರ್ಯ ಎರಡನೇ ದಿನವೂ ಮುಂದುವರಿದಿದ್ದು, ಮೃತರ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಚಿನ್ ರಾಜ್ಯದ ಹಪನ್‌ಕಂಟ್ ಪ್ರದೇಶದಲ್ಲಿರುವ ಹರಳು ಗಣಿಯೊಂದರ ತ್ಯಾಜ್ಯದ ರಾಶಿ ಗುರುವಾರ ಪಕ್ಕದ ಕೆರೆಯೊಂದಕ್ಕೆ ಕುಸಿದಿದ್ದು, ಕೆರೆಯಿಂದದ ಹೊರಬಂದ ನೀರು ಮಿಶ್ರಿತ ಕೆಸರಿನಲ್ಲಿ ಹಲವಾರು ಕಾರ್ಮಿಕರು ಸಮಾಧಿಯಾಗಿದ್ದಾರೆ.

ಈವರೆಗೆ 162 ಮೃತದೇಹಗಳನ್ನು ಹೊರತೆಗೆಯಲಾಗಿದೆ ಹಾಗೂ 43 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ. ಶೋಧ ಕಾರ್ಯ ಈಗಲೂ ನಡೆಯುತ್ತಿದೆ.

ಮೃತರ ಪೈಕಿ ಅರ್ಧದಷ್ಟು ಮಂದಿಯನ್ನು ಇನ್ನಷ್ಟೇ ಗುರುತಿಸಬೇಕಾಗಿದೆ. ಆ ಪೈಕಿ ಹೆಚ್ಚಿನವರು ವಲಸಿಗರು ಹಾಗೂ ಅವರು ಗಣಿಯ ಪಕ್ಕದ ಸಣ್ಣ ಡೇರೆಗಳಲ್ಲಿ ವಾಸಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News