ಅಮೆರಿಕದ ಜಾರ್ಜಿಯದಲ್ಲಿ ನಾಯಿಗೆ ಕೊರೋನ ಸೋಂಕು

Update: 2020-07-04 17:31 GMT

ಅಟ್ಲಾಂಟ (ಅಮೆರಿಕ), ಜು. 4: ಅಮೆರಿಕದ ಜಾರ್ಜಿಯ ನಗರದಲ್ಲಿ ನಾಯಿಯೊಂದು ಕೊರೋನ ವೈರಸ್ ಸೋಂಕಿಗೆ ಗುರಿಯಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ಇದು ಅಮೆರಿಕದಲ್ಲಿ ಈ ಮಾರಕ ರೋಗದ ಸೋಂಕಿಗೆ ಒಳಗಾದ ಎರಡನೇ ನಾಯಿಯಾಗಿದೆ.

ಮಾಲೀಕರಿಗೆ ಕೊರೋನ ವೈರಸ್ ಸೋಂಕು ತಗಲಿದ ಬಳಿಕ 6 ವರ್ಷದ ಮಿಶ್ರತಳಿಯ ನಾಯಿಯಲ್ಲೂ ಸೋಂಕು ಕಾಣಿಸಿಕೊಂಡಿತು. ಸೋಂಕಿಗೆ ಒಳಗಾದ ಬಳಿಕ ನಾಯಿಯು ನರಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲಿತು ಎಂದು ಇತ್ತೀಚೆಗೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಜಾರ್ಜಿಯ ಆರೋಗ್ಯ ಇಲಾಖೆ ತಿಳಿಸಿದೆ.

ನರ ದೌರ್ಬಲ್ಯ ಉಲ್ಬಣಿಸಿದ ಬಳಿಕ ನಾಯಿಯನ್ನು ದಯಾಮರಣಕ್ಕೆ ಗುರಿಪಡಿಸಲಾಯಿತು. ಆದರೆ, ನಾಯಿಯ ನರದ ಸಮಸ್ಯೆಗೂ ಕೊರೋನ ವೈರಸ್‌ಗೂ ಸಂಬಂಧವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News