ಜೈಪುರದಲ್ಲಿ 75,000 ಆಸನ ಸಾಮರ್ಥ್ಯದ ವಿಶ್ವದ 3ನೇ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣ

Update: 2020-07-04 18:27 GMT

ಜೈಪುರ, ಜು.4: ಜೈಪುರದ ಹೊರವಲಯದಲ್ಲಿ 75,000 ಆಸನ ಸಾಮರ್ಥ್ಯ ಮತ್ತು 350 ಕೋಟಿ ರೂ. ವೆಚ್ಚದ ವಿಶ್ವದ 3ನೇ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣವಾಗಲಿದೆ.

100 ಎಕರೆ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಾಣವಾಗಲಿದೆ ಎಂದು ರಾಜಸ್ಥಾನ ಕ್ರಿಕೆಟ್ ಅಸೋಸಿಯೇಶನ್ (ಆರ್‌ಸಿಎ) ಕಾರ್ಯದರ್ಶಿ ಮಹೇಂದ್ರ ಶರ್ಮಾ ತಿಳಿಸಿದ್ದಾರೆ. ಜೈಪುರ-ದಿಲ್ಲಿ ಹೆದ್ದಾರಿಯಲ್ಲಿ ಜೈಪುರದಿಂದ 25 ಕಿ.ಮೀ ದೂರದಲ್ಲಿರುವ ಚೋನ್ಪ್ ಗ್ರಾಮದಲ್ಲಿ ಭೂಮಿಯನ್ನು ಈ ಉದ್ದೇಶಕ್ಕಾಗಿ ಅಂತಿಮಗೊಳಿಸಲಾಗಿದೆ ಎಂದರು. ಮುಂದಿನ ನಾಲ್ಕು ತಿಂಗಳಲ್ಲಿ ಕ್ರೀಡಾಂಗಣ ನಿರ್ಮಾಣ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದರು.

 ಅಹಮದಾಬಾದ್‌ನ ಮೊಟೆರಾ ಕ್ರೀಡಾಂಗಣ ಮತ್ತು ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದ ನಂತರ ಇದು ಮೂರನೇ ಅತಿದೊಡ್ಡ ಕ್ರೀಡಾಂಗಣವಾಗಲಿದೆ ಎಂದು ಅವರು ಹೇಳಿದರು, ಮೊಟೆರಾ 1.10 ಲಕ್ಷ ಆಸನ ಸಾಮರ್ಥ್ಯವನ್ನು ಹೊಂದಿದ್ದರೆ, ಮೆಲ್ಬೋರ್ನ್ ಕ್ರೀಡಾಂಗಣವು 1.02 ಲಕ್ಷ ಜನರಿಗೆ ಆತಿಥ್ಯ ವಹಿಸುತ್ತದೆ.

ಕ್ರಿಕೆಟ್‌ನ ಹೊರತಾಗಿ ಕ್ರೀಡಾಂಗಣದಲ್ಲಿ ಒಳಾಂಗಣ ಆಟಗಳು, ಕ್ರೀಡಾ ತರಬೇತಿ ಅಕಾಡಮಿಗಳು, ಕ್ಲಬ್ ಹೌಸ್ ಮತ್ತು 4,000 ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯವಿದೆ ಎಂದು ಶರ್ಮಾ ವಿವರಿಸಿದರು. ಕ್ರೀಡಾಂಗಣದಲ್ಲಿ ಎರಡು ಅಭ್ಯಾಸ ಮೈದಾನಗಳಿದ್ದು ಅದನ್ನು ರಣಜಿ ಪಂದ್ಯಗಳಿಗೆ ಬಳಸಬಹುದು. ಪ್ರೇಕ್ಷಕರಿಗೆ ಎರಡು ರೆಸ್ಟೋರೆಂಟ್‌ಗಳು , ಆಟಗಾರರಿಗೆ 30 ಅಭ್ಯಾಸ ನೆಟ್‌ಗಳು ಮತ್ತು 250 ಮಂದಿ ಕುಳಿತುಕೊಳ್ಳುವ ಸಾಮರ್ಥ್ಯದ ಪತ್ರಿಕಾಗೋಷ್ಠಿ ಕೋಣೆ ಇರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News