ಪಾಕಿಸ್ತಾನದ ಆರೋಗ್ಯ ಸಚಿವರಿಗೆ ಕೊರೋನ ಸೋಂಕು

Update: 2020-07-06 16:51 GMT

ಇಸ್ಲಾಮಾಬಾದ್, ಜು. 6: “ನಾನು ನೋವೆಲ್-ಕೊರೋನ ವೈರಸ್ ಸೋಂಕಿಗೆ ಗುರಿಯಾಗಿದ್ದೇನೆ” ಎಂದು ಪಾಕಿಸ್ತಾನದ ಆರೋಗ್ಯ ಸಚಿವ ಡಾ. ಝಫರ್ ಮಿರ್ಝಾ ಸೋಮವಾರ ಘೋಷಿಸಿದ್ದಾರೆ. ದೇಶದಲ್ಲಿ ಮಾರಕ ಸಾಂಕ್ರಾಮಿಕ ರೋಗದ ಸೋಂಕಿಗೆ ಒಳಗಾಗಿರುವ ಹಿರಿಯ ಸಚಿವರ ಪಟ್ಟಿಯಲ್ಲಿ ಅವರು ಹೊಸ ಸೇರ್ಪಡೆಯಾಗಿದ್ದಾರೆ.

ಕೊರೋನ ವೈರಸ್ ಸೋಂಕಿನ ಲಘು ಲಕ್ಷಣಗಳು ನನ್ನಲ್ಲಿ ಕಾಣಿಸಿಕೊಂಡಿವೆ ಹಾಗೂ ನಾನು ಎಲ್ಲ ಮುಂಜಾಗರೂಕತೆಗಳನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದು ಸಚಿವರು ಹೇಳಿದ್ದಾರೆ.

‘‘ನನ್ನಲ್ಲಿ ಕೊರೋನ ವೈರಸ್ ಸೋಂಕು ಕಾಣಿಸಿಕೊಂಡಿದೆ. ನಾನು ಈಗ ಮನೆಯಲ್ಲೇ ನನ್ನನ್ನು ಪ್ರತ್ಯೇಕಿಸಿಕೊಂಡಿದ್ದೇನೆ ಹಾಗೂ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದೇನೆ. ನಿಮ್ಮ ಪ್ರಾರ್ಥನೆಗಳ ವೇಳೆ, ನನಗಾಗಿಯೂ ಪ್ರಾರ್ಥಿಸಿ’’ ಎಂದು ಡಾ. ಮಿರ್ಝಾ ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನದಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 2,31,000ವನ್ನು ದಾಟಿದೆ ಹಾಗೂ ಅಲಿ 4,762 ಸಾವುಗಳು ಸಂಭವಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News