ಹಾಂಕಾಂಗ್: ನೂತನ ಕಾನೂನಿನಡಿ ಮೊದಲ ಬಂಧಿತನಿಗೆ ಜಾಮೀನು ನಿರಾಕರಣೆ

Update: 2020-07-06 16:53 GMT

ಹಾಂಕಾಂಗ್, ಜು. 6: ಹಾಂಕಾಂಗ್ ನಲ್ಲಿ  ಚೀನಾ ಜಾರಿಗೆ ತಂದಿರುವ ನೂತನ ರಾಷ್ಟೀಯ ಭದ್ರತಾ ಕಾನೂನಿನ ಅಡಿಯಲ್ಲಿ ಪ್ರತ್ಯೇಕತಾವಾದಕ್ಕೆ ಪ್ರಚೋದನೆ ಮತ್ತು ಭಯೋತ್ಪಾದನೆ ಆರೋಪಗಳಲ್ಲಿ ಬಂಧಿತನಾಗಿರುವ ಮೊದಲ ವ್ಯಕ್ತಿಗೆ ಹಾಂಕಾಂಗ್ ನ್ಯಾಯಾಲಯವೊಂದು ಸೋಮವಾರ ಜಾಮೀನು ನಿರಾಕರಿಸಿದೆ.

‘ಹಾಂಕಾಂಗನ್ನು ಮುಕ್ತಗೊಳಿಸಿ’ ಎನ್ನುವ ಫಲಕವನ್ನು ಪ್ರದರ್ಶಿಸಿರುವುದಕ್ಕಾಗಿ ಹಾಗೂ ಪೊಲೀಸರ ಗುಂಪೊಂದರ ಮೇಲೆ ತನ್ನ  ಬೈಕ್ ಚಲಾಯಿಸಲು ಪ್ರಯತ್ನಿಸಿರುವುದಕ್ಕಾಗಿ ಆತನ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕಳೆದ ಬುಧವಾರ ನಡೆದ ಪ್ರತಿಭಟನಾ ಪ್ರದರ್ಶನವೊಂದರ ವೇಳೆ, 23 ವರ್ಷದ ಟೊಂಗ್ ಯಿಂಗ್-ಕಿಟ್ ಹಲವು ಪೊಲೀಸರ ಮೇಲೆ ಬೈಕ್ ಹರಿಸುವುದನ್ನು ತೋರಿಸುವ ವೀಡಿಯೊವೊಂದು ಇಂಟರ್ನೆಟ್ ನಲ್ಲಿ ಕಾಣಿಸಿಕೊಂಡ ಬಳಿಕ ಆತನನ್ನು ಬಂಧಿಸಲಾಗಿತ್ತು.

ಆರೋಪಿಯು ರಾಷ್ಟ್ರೀಯ ಭದ್ರತೆಗೆ ಅಪಾಯವೊಡ್ಡುವುದನ್ನು ಮುಂದುವರಿಸಲಿದ್ದಾರೆ ಎಂಬುದಾಗಿ ಭಾವಿಸಲು ನ್ಯಾಯಾಧೀಶರಿಗೆ ಸಕಾರಣಗಳಿದ್ದರೆ ಜಾಮೀನು ನೀಡಬಾರದು ಎಂಬ ನೂತನ ಕಾನೂನಿನ 42ನೇ ವಿಧಿಯನ್ನು ಉಲ್ಲೇಖಿಸಿದ ನ್ಯಾಯಾಧೀಶ ಸೊ ಸೈ-ಟಕ್ ಜಾಮೀನು ನಿರಾಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News