ಅಮೆರಿಕ: ಆಕಾಶದಲ್ಲಿ 2 ವಿಮಾನಗಳ ಢಿಕ್ಕಿ; 8 ಸಾವು

Update: 2020-07-06 16:55 GMT
ಸಾಂದರ್ಭಿಕ ಚಿತ್ರ

ವಾಶಿಂಗ್ಟನ್, ಜು. 6: ಅಮೆರಿಕದ ಇಡಾಹೊ ರಾಜ್ಯದಲ್ಲಿ ಎರಡು ವಿಮಾನಗಳು ಆಕಾಶದಲ್ಲಿ ಢಿಕ್ಕಿಯಾಗಿ ಕೋಯರ್ ಡಿ’ಅಲೀನ್ ಸರೋವರಕ್ಕೆ ಅಪ್ಪಳಿಸಿದ್ದು ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪೊಲೀಸರು ರವಿವಾರ ತಿಳಿಸಿದ್ದಾರೆ. ಎರಡು ಮೃತದೇಹಗಳನ್ನು ಹೊರತೆಗೆಯಲಾಗಿದೆ.

‘‘ಎರಡು ವಿಮಾನಗಳಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ 8 ಮಂದಿಯಿದ್ದರು ಎಂದು ಆರಂಭಿಕ ವರದಿಗಳು ತಿಳಿಸಿವೆ. ಆ ಬಗ್ಗೆ ತಪಾಸಣೆ ನಡೆಯುತ್ತಿದೆ. ಅಪಘಾತದಲ್ಲಿ ಬುದಕುಳಿದವರು ಯಾರೂ ಇಲ್ಲ ಎನ್ನುವುದು ಈಗ ಖಚಿತವಾಗಿದೆ’’ ಎಂದು ಕೂಟನೈ ಕೌಂಟಿ ಶೆರಿಫ್ ರ ಕಚೇರಿ ತಿಳಿಸಿದೆ.

ವಿಮಾನಗಳು ಸರೋವರಕ್ಕೆ ಅಪ್ಪಳಿಸಿದ ಬಳಿಕ 127 ಅಡಿ ಆಳಕ್ಕೆ ಮುಳುಗಿವೆ ಎಂದು ಶೆರಿಫ್ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News