ಈ ರಾಜ್ಯದಲ್ಲಿನ್ನು ಸ್ಥಳೀಯರಿಗೆ ಖಾಸಗಿ ಸಂಸ್ಥೆಗಳಲ್ಲಿ ಶೇ.75 ಮೀಸಲಾತಿ

Update: 2020-07-06 17:48 GMT

 ಚಂಡೀಗಢ, ಜು.6: ಖಾಸಗಿ ಸಂಸ್ಥೆಗಳ ಶೇ.75ರಷ್ಟು ಉದ್ಯೋಗಗಳನ್ನು ರಾಜ್ಯದ ನಿವಾಸಿಗಳಿಗೆ ಮೀಸಲಿಡುವ ವಿಧೇಯಕಕ್ಕೆ ಹರ್ಯಾಣ ಸಂಪುಟವು ಶನಿವಾರ ಅನುಮೋದನೆ ನೀಡಿದೆ.

ಖಾಸಗಿ ವಲಯದಲ್ಲಿ ಉದ್ಯೋಗ ಮೀಸಲಾತಿಗೆ ಸಂಬಂಧಿಸಿ ಕರಡು ಮಸೂದೆಯೊಂದನ್ನು ರೂಪಿಸಲು ಪ್ರಸ್ತಾಪವನ್ನು ಜನವರಿ 31ರಂದು ಸಂಪುಟ ಸಭೆಯು ತಡೆಹಿಡಿದಿತ್ತು. ಆನಂತರ ಅದನ್ನು ಸಂಪುಟ ಸದಸ್ಯರ ನಡುವೆ ಸುದೀರ್ಘ ಮಾತುಕತೆಗಳು ನಡೆದ ಬಳಿಕ ಕರಡು ಮಸೂದೆಯನ್ನು ಸಂಪುಟ ಕಾರ್ಯದರ್ಶಿಯವರ ಪರಿಶೀಲನೆಗೆ ಒಪ್ಪಿಸಲಾಯಿತು.

  ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಸರಕಾರದ ಪಾಲುದಾರ ಪಕ್ಷವಾದ ಜನನಾಯಕ ಜನತಾ ಪಾರ್ಟಿ (ಜೆಜೆಪಿ) ತನ್ನ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಹರ್ಯಾಣದ ಯುವಜನರಿಗೆ ಖಾಸಗಿ ಉದ್ಯೋಗಗಳಲ್ಲಿ ಶೇ.75 ಮೀಸಲಾತಿಯನ್ನು ಒದಗಿಸುವುದಾಗಿ ಆಶ್ವಾಸನೆ ನೀಡಿತ್ತು. ಆದಾಗ್ಯೂ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಈ ಪ್ರಸ್ತಾಪದ ಬಗ್ಗೆ ಬದ್ಧತೆಯನ್ನು ವ್ಯಕ್ತಪಡಿಸಲಿಲ್ಲ ಎನ್ನಲಾಗಿದೆ.

ಇದಕ್ಕೂ ಮುನ್ನ, ಆಂಧ್ರಪ್ರದೇಶದ ವೈ.ಎಸ್.ಜಗನ್ ಮೋಹನ್ ರೆಡ್ಡಿ ಸರಕಾರವು ಖಾಸಗಿ ವಲಯದ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಮೀಸಲಾತಿ ಒದಗಿಸುವ ಮಸೂದೆಯನ್ನು ಅಂಗೀಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News