ಆನ್ಲೈನ್ ಕೋರ್ಸ್ಗಳ ವಿದೇಶಿ ವಿದ್ಯಾರ್ಥಿಗಳು ದೇಶ ತೊರೆಯಬೇಕು: ಅಮೆರಿಕ

Update: 2020-07-07 15:00 GMT

ಆನ್ ಲೈನ್ ಕೋರ್ಸ್ ಗಳ ವಿದೇಶಿ ವಿದ್ಯಾರ್ಥಿಗಳು ದೇಶ ತೊರೆಯಬೇಕು: ಅಮೆರಿಕ

ವಾಶಿಂಗ್ಟನ್, ಜು. 7: ಕೊರೋನ ವೈರಸ್ ಬಿಕ್ಕಟ್ಟಿನಿಂದಾಗಿ ಎಲ್ಲ ತರಗತಿಗಳು ಆನ್ಲೈನ್ ಮೂಲಕವೇ ನಡೆಯುವುದಾದರೆ, ವಿದೇಶಿ ವಿದ್ಯಾರ್ಥಿಗಳಿಗೆ ದೇಶದಲ್ಲಿ ಉಳಿಯಲು ಅವಕಾಶ ನೀಡುವುದಿಲ್ಲ ಎಂದು ಅಮೆರಿಕ ಸೋಮವಾರ ಹೇಳಿದೆ.

‘‘ನಾನ್ ಇಮಿಗ್ರಾಂಟ್ (ತಾತ್ಕಾಲಿಕವಾಗಿ ಅಮೆರಿಕದಲ್ಲಿ ವಾಸಿಸಲು ಅವಕಾಶ ನೀಡುವ) ಎಫ್-1 ಮತ್ತು ಎಂ-1 ವೀಸಾಗಳನ್ನು ಹೊಂದಿರುವ ವಿದ್ಯಾರ್ಥಿಗಳು, ಸಂಪೂರ್ಣ ಕೋರ್ಸನ್ನು ಆನ್ಲೈನ್ ಮೂಲಕವೇ ಮಾಡುವ ಕಾಲೇಜುಗಳಿಗೆ ಸೇರ್ಪಡೆಗೊಂಡಿದ್ದರೆ ಅವರು ಅಮೆರಿಕದಲ್ಲಿ ಉಳಿಯಲು ಸಾಧ್ಯವಿಲ್ಲ’’ ಎಂದು ಅಮೆರಿಕದ ಇಮಿಗ್ರೇಶನ್ ಮತ್ತು ಕಸ್ಟಮ್ ಎನ್ಫೋರ್ಸ್ಮೆಂಟ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

‘‘ಈ ಕೋರ್ಸ್ ಗಳನ್ನು ಮಾಡುವುದಕ್ಕಾಗಿ ಈಗಾಗಲೇ ಅಮೆರಿಕದಲ್ಲಿರುವ ವಿದ್ಯಾರ್ಥಿಗಳು ದೇಶವನ್ನು ತೊರೆಯಬೇಕು. ಅಥವಾ ಅವರು ಕಾನುನುಬದ್ಧವಾಗಿ ಅಮೆರಿಕದಲ್ಲಿ ಉಳಿಯಬೇಕಾದರೆ ಭೌತಿಕವಾಗಿ ತರಗತಿಗಳಿಗೆ ಹಾಜರಾಗುವ ಕಾಲೇಜುಗಳಿಗೆ ಸೇರ್ಪಡೆಗೊಳ್ಳಬೇಕು’’ ಎಂದು ಅದು ತಿಳಿಸಿದೆ.

‘‘ಇದರಲ್ಲಿ ವಿಫಲವಾದರೆ ಅವರು ವಲಸೆ ಸಂಬಂಧಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಅವರನ್ನು ಹೊರದಬ್ಬುವ ಪ್ರಕ್ರಿಯೆಗಳಿಗೆ ಹಾಗೂ ಹೆಚ್ಚಿನ ಕ್ರಮಗಳಿಗೆ ಚಾಲನೆ ನೀಡಬಹುದಾಗಿದೆ’’ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News