ಯೆಸ್ ಬ್ಯಾಂಕ್ ಸಹಸಂಸ್ಥಾಪಕ ರಾಣಾ ಕಪೂರ್ ಮತ್ತಿತರರ 2200 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

Update: 2020-07-09 17:41 GMT
file photo

ಹೊಸದಿಲ್ಲಿ: ಹಣಕಾಸು ಅವ್ಯವಹಾರ ತಡೆ ಕಾನೂನಿನ ಅನ್ವಯ ಯೆಸ್ ಬ್ಯಾಂಕ್ ಸಹಸಂಸ್ಥಾಪಕ ರಾಣಾ ಕಪೂರ್ ಮತ್ತು ಇತರರಿಗೆ ಸೇರಿದ 2203 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಕಾನೂನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.

ಡಿಎಚ್ಎಫ್ಎಲ್ ಪ್ರವರ್ತಕ ಕಪಿಲ್ ಮತ್ತು ಧೀರಜ್ ವಧ್ವಾನ್ ಅವರ ಆಸ್ತಿಗಳನ್ನೂ ಕಾಯ್ದೆಯ ಅನ್ವಯ ಹೊರಡಿಸಲಾದ ತಾತ್ಕಾಲಿಕ ಆದೇಶದ ಅನ್ವಯ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಕಪೂರ್ ಅವರಿಗೆ ಸೇರಿದ ಕೆಲ ವಿದೇಶಿ ಆಸ್ತಿಗಳನ್ನು ಕೂಡಾ ಕೇಂದ್ರೀಯ ಏಜೆನ್ಸಿ ವಶಕ್ಕೆ ಪಡೆದಿದೆ. ಕಪೂರ್ ಮತ್ತು ಅವರ ಕುಟುಂಬದ ಸದಸ್ಯರು ದೊಡ್ಡ ಸಾಲಗಳನ್ನು ನೀಡುವ ನೆಪದಲ್ಲಿ 4300 ಕೋಟಿ ರೂಪಾಯಿ ರುಷುವತ್ತು ಪಡೆದಿದ್ದಾರೆ ಎಂದು ಕಾನೂನು ಜಾರಿ ನಿರ್ದೇಶನಾಯಕ ಆಪಾದಿಸಿದೆ. ಈ ಸಾಲಗಳು ಬಳಿಕ ಅನುತ್ಪಾದಕ ಆಸ್ತಿಯಾಗಿ ಮಾರ್ಪಟ್ಟಿವೆ ಎಂದು ಹೇಳಿದೆ.

ಕೇಂದ್ರೀಯ ತನಿಖಾ ಏಜೆನ್ಸಿ ಕಪೂರ್ ಅವರನ್ನು ಕಳೆದ ಮಾರ್ಚ್ ನಲ್ಲಿ ಬಂಧಿಸಿದ್ದು, ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News