ಬ್ರಿಟನ್ ಸಂಪರ್ಕ ಜಾಲದಿಂದ ವಾವೇ ಸಲಕರಣೆಗಳನ್ನು ತೆಗೆಯಲು ಕನಿಷ್ಠ 5 ವರ್ಷ: ವೊಡಾಫೋನ್

Update: 2020-07-09 18:58 GMT

ಲಂಡನ್, ಜು. 9: ಬ್ರಿಟಿಶ್ ದೂರಸಂಪರ್ಕ ಜಾಲಗಳಿಂದ ಚೀನಾದ ವಾವೇ ಕಂಪೆನಿಯ ಸಲಕರಣೆಗಳನ್ನು ತೆಗೆಯಲು ಕನಿಷ್ಠ 5 ವರ್ಷಗಳು ಬೇಕಾಗುತ್ತವೆ ಹಾಗೂ ಇದಕ್ಕೆ ಬಿಲಿಯಗಟ್ಟಳೆ ಪೌಂಡ್ ವೆಚ್ಚ ತಗಲುತ್ತವೆ ಎಂದು ಬ್ರಿಟನ್ನ ದೂರಸಂಪರ್ಕ ಕಂಪೆನಿಗಳಾದ ವೊಡಾಫೋನ್ ಮತ್ತು ಬಿಟಿ ಹೇಳಿವೆ.

ವಾವೇ ಕಂಪೆನಿಯ ವಿರುದ್ಧ ವಿಧಿಸಲಾಗುವ ನಿರ್ಬಂಧಗಳ್ನು ಜಾರಿಗೊಳಿಸಲು ಹಲವಾರು ವರ್ಷಗಳ ಕಾಲಾವಧಿ ಬೇಕಾಗುತ್ತದೆ ಎಂದು ವೊಡಾಫೋನ್ ಯುಕೆಯ ನೆಟ್ವರ್ಕ್ಸ್ ಮುಖ್ಯಸ್ಥ ಆ್ಯಂಡ್ರಿ ಡೋನ ಸಂಸದೀಯ ಸಮಿತಿಯೊಂದಕ್ಕೆ ತಿಳಿಸಿದರು. ಅದಕ್ಕೆ ಕನಿಷ್ಠ ಐದು ವರ್ಷಗಳ ಪರಿವರ್ತನಾ ಸಮಯ ಬೇಕಾಗಿದೆ ಎಂದರು.

ಅದೇ ವೇಳೆ, ಬ್ರಿಟನ್ ಸಂಪರ್ಕ ಜಾಲದಿಂದ ವಾವೇಯನ್ನು ತೆಗೆದುಹಾಕಲು ತನಗೆ ಕನಿಷ್ಠ 5 ವರ್ಷಗಳು ಹಾಗೂ ಒಟ್ಟಾರೆ ಏಳು ವರ್ಷಗಳು ಬೇಕಾಗಬಹುದು ಎಂದು ಇನ್ನೊಂದು ಟೆಲಿಕಾಮ್ ಕಂಪೆನಿ ಬಿಟಿ ಅದೇ ಸಂಸದೀಯ ಸಮಿತಿಗೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News