ಬೊಲಿವಿಯಾದ ಹಂಗಾಮಿ ಅಧ್ಯಕ್ಷೆ ಜೀನೈನ್ ಅನೆಝ್‌ಗೆ ಕೋವಿಡ್-19 ಸೋಂಕು

Update: 2020-07-10 05:08 GMT

ಲಾ ಪಾಝ್(ಬೊಲಿವಿಯಾ), ಜು.10: ಬೊಲಿವಿಯಾದ ಹಂಗಾಮಿ ಅಧ್ಯಕ್ಷೆ ಜೀನೈನ್ ಅನೆಝ್‌ಗೆ ಕೋವಿಡ್-19 ಸೋಂಕು ತಗಲಿದೆ. ತನಗೆ ಕೊರೋನ ವೈರಸ್ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ ಎಂದು ಗುರುವಾರ ಸ್ವತಃ ಅನೆಝ್ ಬಹಿರಂಗಪಡಿಸಿದ್ದಾರೆ.

ಕೋವಿಡ್-19 ಪರೀಕ್ಷೆಯಲ್ಲಿ ನನಗೆ ಪಾಸಿಟಿವ್ ಫಲಿತಾಂಶ ಬಂದಿದೆ. ನಾನು ಆರೋಗ್ಯವಾಗಿದ್ದೇನೆ. ಐಸೋಲೇಶನ್‌ನಲ್ಲಿದ್ದುಕೊಂಡು ಕೆಲಸ ಮಾಡುತ್ತಿದ್ದೇನೆ ಎಂದು ಅನೆಝ್ ಟ್ವೀಟ್ ಮಾಡಿದ್ದಾರೆ.

ಮತ್ತೊಮ್ಮೆ ಪರೀಕ್ಷೆಗೆ ಒಳಗಾಗುವ ಮೊದಲು 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರುತ್ತೇನೆ ಎಂದು 53ರ ಹರೆಯದ ಅನೆಝ್ ಟ್ವಿಟರ್‌ನಲ್ಲಿ ವೀಡಿಯೊ ಮೂಲಕ ಹೇಳಿದ್ದಾರೆ.

ಅನೆಝ್ ಅವರು ಬ್ರೆಝಿಲ್‌ನ ಜೈರ್ ಬೊಲ್ಸೊನಾರೊ ಬಳಿಕ ಕೋವಿಡ್-19 ಸೋಂಕಿಗೆ ಒಳಗಾಗಿರುವ ದಕ್ಷಿಣ ಅಮೆರಿಕದ ಎರಡನೇ ಅಧ್ಯಕ್ಷರಾಗಿದ್ದಾರೆ. ಬೊಲ್ಸೊನಾರೊ ಮಂಗಳವಾರ ತನಗೆ ಕೊರೋನ ವೈರಸ್ ದೃಢಪಟ್ಟಿದೆ ಎಂದು ಘೋಷಿಸಿದ್ದರು.

ಬೊಲಿವಿಯಾದಲ್ಲಿ ಸುಮಾರು 43,000 ಜನರಿಗೆ ಕೊರೋನ ವೈರಸ್ ಸೋಂಕು ತಗಲಿದ್ದು, ಈಪೈಕಿ 1500 ಮಂದಿ ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News