ಟೆಸ್ಟ್ ಕ್ರಿಕೆಟ್: ವೇಗವಾಗಿ 4,000 ರನ್-150 ವಿಕೆಟ್ ಕಬಳಿಸಿದ ಎರಡನೇ ಆಲ್‌ರೌಂಡರ್ ಸ್ಟೋಕ್ಸ್

Update: 2020-07-11 11:51 GMT

ಸೌಥಾಂಪ್ಟನ್, ಜು.1: ಇಂಗ್ಲೆಂಡ್‌ನ ಹಂಗಾಮಿ ನಾಯಕ ಬೆನ್ ಸ್ಟೋಕ್ಸ್ ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೇ ಅತ್ಯಂತ ವೇಗವಾಗಿ 4,000 ರನ್ ಹಾಗೂ 150 ವಿಕೆಟ್‌ಗಳನ್ನು ಪೂರೈಸಿದ ಆಲ್‌ರೌಂಡರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಇಂಗ್ಲೆಂಡ್ ಹಾಗೂ ವೆಸ್ಟ್‌ಇಂಡೀಸ್‌ನ ನಡುವೆ ಅಗಾಸ್ ಬೌಲ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ ಮೂರನೆ ದಿನದಾಟದಲ್ಲಿ ಸ್ಟೋಕ್ಸ್ ಈ ಸಾಧನೆ ಮಾಡಿದರು.

ವಿಂಡೀಸ್‌ನ ಅಲ್ಝಾರಿ ಜೋಸೆಫ್ ವಿಕೆಟ್ ಉರುಳಿಸಿದ ಸ್ಟೋಕ್ಸ್ ಮಾಜಿ ಇಂಗ್ಲೆಂಡ್ ಆಲ್‌ರೌಂಡರ್ ಇಯಾನ್ ಬೋಥಂ ಕ್ಲಬ್‌ಗೆ ಸೇರ್ಪಡೆಯಾದರು. 4,000 ಟೆಸ್ಟ್ ರನ್ ಹಾಗೂ 150ಕ್ಕೂ ಅಧಿಕ ವಿಕೆಟ್‌ಗಳನ್ನು ಪಡೆದ ಇತರ ನಾಲ್ವರು ಶ್ರೇಷ್ಠ ಆಟಗಾರರ ಕ್ಲಬ್‌ಗೆ ಸೇರಿದರು.

ಸ್ಟೋಕ್ಸ್ 14 ಓವರ್‌ಗಳ ಬೌಲಿಂಗ್‌ನಲ್ಲಿ ಐದು ಮೇಡನ್ ಓವರ್ ಸಹಿತ 49 ರನ್‌ಗೆ 4 ವಿಕೆಟ್‌ಗಳನ್ನು ಉರುಳಿಸಿದರು.

 29ರ ಹರೆಯದ ಆಲ್‌ರೌಂಡರ್ ಸ್ಟೋಕ್ಸ್ 64ನೇ ಪಂದ್ಯದಲ್ಲಿ ಈ ಮೈಲುಗಲ್ಲು ತಲುಪಿದರು.ಮಾಜಿ ವೆಸ್ಟ್‌ಇಂಡೀಸ್ ದಿಗ್ಗಜ ಗ್ಯಾರಿ ಸೋಬರ್ಸ್ 63ನೇ ಟೆಸ್ಟ್‌ನಲ್ಲಿ ಈ ಸಾಧನೆ ಮಾಡಿರುವ ಮೊದಲ ಆಟಗಾರನಾಗಿದ್ದಾರೆ. ಸೋಬರ್ಸ್ ಹಾಗೂ ಸ್ಟೋಕ್ಸ್‌ರಲ್ಲದೆ, ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಕಸ್ ಕಾಲಿಸ್, ಭಾರತದ ಕಪಿಲ್‌ದೇವ್ ಹಾಗೂ ನ್ಯೂಝಿಲ್ಯಾಂಡ್‌ನ ಮಾಜಿ ನಾಯಕ ಡೇನಿಯಲ್ ವೆಟೋರಿ ಈ ಸಾಧನೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News