ನೋಟ್ ಬ್ಯಾನ್ ವಿಚಾರವೇ ಗೊತ್ತಿಲ್ಲದೆ 24 ಸಾವಿರ ರೂ. ಮುಖಬೆಲೆಯ ಹಳೆಯ ನೋಟು ಉಳಿತಾಯ ಮಾಡಿದ್ದ ಅಂಧ ದಂಪತಿ

Update: 2020-07-12 18:10 GMT

ಈರೋಡ್, ಜು.12: ಜಿಲ್ಲೆಯ ಅಂಧ ದಂಪತಿ ಸುಮಾರು 10 ವರ್ಷಗಳಿಂದ 24 ಸಾವಿರ ರೂಪಾಯಿ ಉಳಿತಾಯ ಮಾಡಿದ್ದು, ಆದರೆ ಅವು ಅಮಾನ್ಯಗೊಂಡ ನೋಟುಗಳು ಎನ್ನುವುದು ಕಳೆದ ವಾರವಷ್ಟೇ ಅವರ ಗಮನಕ್ಕೆ ಬಂದಿದೆ.

ಜಿಲ್ಲೆಯ ಪೊತಿಯಾ ಮೂಪನೂರು ಎಂಬ ಗ್ರಾಮದ 58 ವರ್ಷ ವಯಸ್ಸಿನ ಸೋಮು ಹಾಗೂ ಪತ್ನಿ ಪಳನಿಯಮ್ಮಾಳ್, ಅಗರಬತ್ತಿ ಮಾರಾಟ ಮಾಡಿ ಬಂದ ಆದಾಯದ ಒಂದಂಶವನ್ನು ಕೂಡಿಟ್ಟಿದ್ದರು. ಆದರೆ ಇವು 1000 ರೂಪಾಯಿ ಮತ್ತು 500 ರೂಪಾಯಿ ಮೌಲ್ಯದ ನೋಟುಗಳಾಗಿದ್ದು, 2016ರಲ್ಲಿ ಸರಕಾರ ಇದನ್ನು ಅಮಾನ್ಯಗೊಳಿಸಿತ್ತು.

ತಮ್ಮ ಉಳಿತಾಯವನ್ನು ಬ್ಯಾಂಕಿನಲ್ಲಿ ಠೇವಣಿ ಇಡಲು ತೆರಳಿದಾಗ ಶುಕ್ರವಾರ, ಈ ನೋಟುಗಳು ಅಮಾನ್ಯಗೊಂಡಿವೆ ಎನ್ನುವುದು ಗೊತ್ತಾಗಿದೆ ಎಂದು ಸೋಮು ಹೇಳುತ್ತಾರೆ. ಕಳೆದ ನಾಲ್ಕು ತಿಂಗಳಿಂದ ಲಾಕ್ ಡೌನ್ ನಿಂದಾಗಿ ಆದಾಯ ಇಲ್ಲದ ಹಿನ್ನೆಲೆಯಲ್ಲಿ ತಮ್ಮ ಬಳಿ ಇದ್ದ ಹಣವನ್ನು ಬಳಸಿಕೊಳ್ಳಲು ನಿರ್ಧರಿಸಿದ್ದಾಗಿ ತಿಳಿದುಬಂದಿದೆ. 10 ವರ್ಷಗಳಲ್ಲಿ ಅಗರಬತ್ತಿ ಮತ್ತು ಕರ್ಪೂರ ಮಾರಾಟ ಮಾಡಿ ಈ ಹಣ ಉಳಿಸಿದ್ದರು. ಬಂದ ನಗದನ್ನು 500 ಅಥವಾ 1000 ರೂಪಾಯ ನೋಟಾಗಿ ಪರಿವರ್ತಿಸಿ ಉಳಿತಾಯ ಮಾಡಿದ್ದರು. ಈ ಸಂಬಂಧ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿಯವರಿಗೆ ಮನವಿ ಸಲ್ಲಿಸಿರುವ ಸೋಮು ಸರಕಾರದಿಂದ ನೆರವು ಯಾಚಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News